Breaking
19 Sep 2026, Sat

ಈಜಲು ತೆರಳಿದ್ದ ರಿಕ್ಷಾ ಚಾಲಕ ನದಿಯಲ್ಲಿ ಮುಳುಗಿ ಸಾವು

ಉಡುಪಿ: ನೀರಿನಲ್ಲಿ ಮುಳುಗಿ ರಿಕ್ಷಾ ಚಾಲಕರೊಬ್ಬರು ಮೃತಪಟ್ಟ ಘಟನೆ ಏ. 26 ರಂದು ನಡೆದಿದೆ.

ಮೃತಪಟ್ಟ ವ್ಯಕ್ತಿಯನ್ನು ಸುಜಿತ್ ಕುಮಾರ್ (42) ಎಂದು ಗುರುತಿಸಲಾಗಿದೆ.

ಏ. 26 ರಂದು ಬೆಳಿಗ್ಗೆ ಕೆಲಸಕ್ಕೆ ಹೊರಟ ಸುಜಿತ್‌ ಅವರು ಮದ್ಯಾಹ್ನ ಉಡುಪಿ ತಾಲ್ಲೂಕಿನ ಹೆರ್ಗ ಗ್ರಾಮದ ಹೊಳೆಬಾಗಿಲು ನದಿಯಲ್ಲಿ ಈಜಲು ತೆರಳಿದ್ದರು. ಈ ವೇಳೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಏಪ್ರಿಲ್ 27 ರಂದು ಬೆಳಿಗ್ಗೆ ನದಿಯ ದಡದಲ್ಲಿ ಅವರ ಮೃತದೇಹ ಪತ್ತೆಯಾಗಿದೆ.

ಈ ಕುರಿತು ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *