ಬಂಟ್ವಾಳ: ಹೃದಯಾಘಾತದಿಂದ ಯುವ ವಿದ್ವಾಂಸರೊಬ್ಬರು ಮೃತಪಟ್ಟ ಘಟನೆ ಏ. 27 ರಂದು ನಡೆದಿದೆ.
ಮೃತಪಟ್ಟವರನ್ನು ಪುತ್ತುಮೊಣಕಾ ಅವರ ಪುತ್ರ ಮತ್ತು ಮೂಲತಃ ಸಜಿಪನಾಡು ನಿವಾಸಿ ಅಮೀರ್ ಅರ್ಶದಿ (36) ಎಂದು ಗುರುತಿಸಲಾಗಿದೆ.

ಸಜಿಪ ಮುನ್ನೂರು ಗ್ರಾಮದ ಆಲಂಪಾಡಿ-ಕೊಪ್ಪಳದಲ್ಲಿ ಅವರ ಹೊಸದಾಗಿ ನಿರ್ಮಿಸಲಾದ ಮನೆಯ ಗೃಹಪ್ರವೇಶ ಸಮಾರಂಭವು ಏ. 17 ರಂದು ಔಪಚಾರಿಕವಾಗಿ ನಡೆದಿತ್ತು. ಏ. 27 ರ ರಂದು ಮಧ್ಯಾಹ್ನ ಸಂಬಂಧಿಕರು ಮತ್ತು ಸ್ನೇಹಿತರಿಗಾಗಿ ಔತಣಕೂಟವನ್ನು ಏರ್ಪಡಿಸಲಾಗಿತ್ತು. ಆದರೆ ಏ. 26 ರಂದು ರಾತ್ರಿ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು ತಕ್ಷಣವೇ ಅವರನ್ನು ಬಿ.ಸಿ.ರೋಡ್ ರಸ್ತೆ ಬಳಿಯ ಪರ್ಲಿಯದಲ್ಲಿರುವ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು, ಆದರೆ ಆ ಅಷ್ಟರಾಗಲೇ ಅವರು ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ.

ಕಳೆದ ಐದು ವರ್ಷಗಳಿಂದ ತಾಳಿಪಡ್ಪು ಮಸ್ಜಿದುಲ್ ಹುದಾ ಮಸೀದಿಯಲ್ಲಿ ಖತೀಬ್ ಆಗಿ ಸೇವೆ ಸಲ್ಲಿಸುತ್ತಿದ್ದರು ಮತ್ತು ಅತ್ಯುತ್ತಮ ವಾಗ್ಮಿ ಎಂದು ಹೆಸರುವಾಸಿಯಾಗಿದ್ದರು.

ಮೃತ ಅಮೀರ್ ಅರ್ಷದಿ ಅವರು ಪೋಷಕರು, ಪತ್ನಿ, ಮಗ, ಮಗಳು ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.


