Breaking
19 Jun 2026, Fri

ಸ್ನಾನ ಗೃಹದಲ್ಲಿ ಬಿದ್ದು ಹೋಟೆಲ್ ಸಿಬ್ಬಂದಿ ಸಾವು

ಮಣಿಪಾಲ: ಹೋಟೆಲ್‌ ಸಿಬ್ಬಂದಿ ಸ್ನಾನ ಗೃಹದಲ್ಲಿ ಬಿದ್ದು ಮೃತಪಟ್ಟ ಘಟನೆ ಏ. 24 ರಂದು ನಡೆದಿದೆ.

ಮೃತಪಟ್ಟವರನ್ನು ಕಾರ್ಕಳ ಮಾಳ ಗ್ರಾಮದ ವಿಜಯ ಎಸ್‌ (ವ48 ) ಎಂದು ಗುರುತಿಸಲಾಗಿದೆ.

ಶಿವಳ್ಳಿ ಗ್ರಾಮದ ಖಾಸಗಿ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ವಿಜಯ ಅವರು ತಂಗುವ ಕೊಠಡಿಯ ಸ್ನಾನಗೃಹದಲ್ಲಿ ಬಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಇದನ್ನು ಗಮನಿಸಿದ ಹೋಟೆಲ್‌ನ ಇತರ ಸಿಬ್ಬಂದಿ ಅವರನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಪರಿಶೀಲಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಈ ಕುರಿತು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *