Breaking
25 Apr 2026, Sat

ಬೈಕ್ ಗೆ ಕಾರು ಡಿಕ್ಕಿ: ಸವಾರ ಸಾವು

ಕಾರ್ಕಳ: ನಿಟ್ಟೆ ಸಮುದಾಯ ಆರೋಗ್ಯ ಕೇಂದ್ರದ ಕ್ರಾಸ್‌ ಬಳಿ ಬೈಕ್‌ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿ ಬೈಕ್‌ ಸವಾರ ಮೃತಪಟ್ಟ ಘಟನೆ ಏ. 24 ರಂದು ನಡೆದಿದೆ.

ಮೃತಪಟ್ಟವರನ್ನು ನಿಟ್ಟೆ ಸಮೀಪದ ಬಜಕಳ ನಿವಾಸಿ ನವೀನ್‌ ಚಂದ್ರ ಮೂಲ್ಯ (45) ಎಂದು ಗುರುತಿಸಲಾಗಿದೆ.

ನವೀನ್‌ ಚಂದ್ರ ಅವರು ತಮ್ಮ ಮಗಳು ಪ್ರೇರಣಾ ಅವರನ್ನು ಸಿಇಟಿ ಪರೀಕ್ಷೆ ಬರೆಯಿಸಿ ಬೈಕ್‌ನಲ್ಲಿ ಮನೆಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಕಾರ್ಕಳದಿಂದ ನಿಟ್ಟೆ ಕಡೆಗೆ ಅತಿವೇಗವಾಗಿ ಬಂದ ಕಾರು ಬೈಕ್‌ಗೆ ಡಿಕ್ಕಿ ಹೊಡೆದಿದೆ.

ಢಿಕ್ಕಿಯ ತೀವ್ರತೆಗೆ ಬೈಕ್ ಸವಾರರು ರಸ್ತೆಗೆ ಎಸೆಯಲ್ಪಟ್ಟಿದ್ದು, ನವೀನ್ ಚಂದ್ರ ಹಾಗೂ ಪ್ರೇರಣಾ ಅವರಿಗೆ ಗಂಭೀರ ಗಾಯಗಳಾಗಿತ್ತು. ತಕ್ಷಣವೇ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆಗೆ ಸ್ಪಂದಿಸದೆ ನವೀನ್‌ ಚಂದ್ರ ಅವರು ಮೃತಪಟ್ಟಿದ್ದಾರೆ.

ಪ್ರೇರಣಾ ಮೂಲ್ಯ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Leave a Reply

Your email address will not be published. Required fields are marked *