Breaking
19 Sep 2026, Sat

ಬಂಟ್ವಾಳ ತಾಲೂಕಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 97.87% ಫಲಿತಾಂಶ

ಬಂಟ್ವಾಳ: ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯಲ್ಲಿ ಈ ಬಾರಿ ಬಂಟ್ವಾಳ ತಾಲೂಕಿಗೆ 97.87% ಫಲಿತಾಂಶ ದೊರಕಿದೆ.

ತಾಲೂಕಿನಲ್ಲಿ ಒಟ್ಟು 5,488 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಇದರಲ್ಲಿ 2,862 ಹುಡುಗರು ಮತ್ತು 2,626 ಹುಡುಗಿಯರು ಸೇರಿದ್ದಾರೆ.

ತೇರ್ಗಡೆಯಾದವರ ಪೈಕಿ 2,776 ಹುಡುಗರು ಹಾಗೂ 2,595 ಹುಡುಗಿಯರು ಸೇರಿ ಒಟ್ಟು 5,371 ಮಂದಿ ಉತ್ತೀರ್ಣರಾಗಿದ್ದಾರೆ.

ತಾಲೂಕಿನ ಒಟ್ಟು 96 ಶಾಲೆಗಳಲ್ಲಿ 13 ಅನುದಾನಿತ ಪ್ರೌಢಶಾಲೆಗಳು, 42 ಸರಕಾರಿ ಹೈಸ್ಕೂಲ್‌ಗಳು ಮತ್ತು 41 ಅನುದಾನರಹಿತ ಶಾಲೆಗಳಿವೆ.

Leave a Reply

Your email address will not be published. Required fields are marked *