ಮೈಸೂರು: Beml ಪ. ಜಾ / ಪ.ಪಂ ನೌಕರರ ಕ್ಷೇಮಾಭಿವೃದ್ಧಿ ಸಂಘ (ರಿ ) ಮೈಸೂರ್ ರವರ ವತಿಯಿಂದ ಹಾಗೂ PGRSS ಪಂಚಾಯತ್ ಗ್ರಾಮಾಭಿವೃದ್ಧಿ ರೈತರ ಸೇವಾ (ರಿ ) ಮತ್ತು Beml ಆರೋಗ್ಯ ಕೇಂದ್ರ & ಚಲ್ಲಹಳ್ಳಿ ಗ್ರಾಮ ಪಂಚಾಯಿತಿ . ನಾರಾಯಣ ಹೆಲ್ತ್ ಮೈಸೂರ್ ಮತ್ತು ವಾಸನ್ ಐ ಕೇರ್ ಮೈಸೂರ್ ಇವರ ಸಂಯುಕ್ತ ಸಹಾಯದೊಂದಿಗೆ ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ಬೆಂಕಿಪುರ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಉಚಿತ ಕಣ್ಣಿನ ತಪಾಸಣಾ ಶಿಬಿರವು ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು Beml ಪ. ಜಾ / ಪ.ಪಂ ನೌಕರರ ಕ್ಷೇಮಾಭಿವೃದ್ಧಿ ಸಂಘ ಅಧ್ಯಕ್ಷರಾದ M V ಮಾದೇವು ರವರು ಮಾಡಿದರು ಹಾಗೂ ಎಲ್ಲಾ ಗಣ್ಯರ ಸಮ್ಮುಖದಲ್ಲಿ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ದೀಪ ಬೆಳಗಿಸಿದರು.

500ಕ್ಕೂ ಹೆಚ್ಚು ಸುತ್ತಮುತ್ತಲಿನ ಹಿರಿಯ ಗ್ರಾಮಸ್ಥರು ಬಂದು ತಪಾಸಣೆ ಮಾಡಿಸಿಕೊಂಡು Beml ಆರೋಗ್ಯ ಕೇಂದ್ರದ ವತಿಯಿಂದ ಉಚಿತ ಮೆಡಿಸಿನ್ ವಿತರಣೆ ಮಾಡಿದರು.

ಕಾರ್ಯಕ್ರಮದಲ್ಲಿ ಬಿಇಎಂಎಲ್ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ M V ಮಾದೇವು ರವರು ಮತ್ತು ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು BEML ಕಾರ್ಮಿಕ ಸಂಘದ ಅಧ್ಯಕ್ಷರಾದ ದಿವಾಕರ್ ಜೆ Beml ಅಧಿಕಾರಿ ವರ್ಗದ ಉಪಾಧ್ಯಕ್ಷರಾದ ಮಾದೇಗೌಡರು ವಾಸನ್ ಐ ಕೇರ್ ಕಾರ್ತಿಕ್ ನಾರಾಯಣ ಹಾಸ್ಪಿಟಲ್ ಡಾ. ನವೀನ್ ಡಾ. ಹರ್ಷಿತ ಚಲ್ಲಹಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಚೆನ್ನಮ್ಮನವರ ಬೆಂಕಿಪುರ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಹೆಡ್ ಮಾಸ್ಟರ್ ಆದ ರಾಜೇಶ್ ರವರು PGRSS ಪಂಚಾಯತ್ ಗ್ರಾಮ ಅಭಿವೃದ್ಧಿ ಸೇವಾ ಸಮಿತಿಯ ಅಧ್ಯಕ್ಷರಾದ ಯಾದವ್ ಹರೀಶ್ ರವರು ರಾಜ್ಯ ಸಂಚಾಲಕರಾದ ರಕ್ತದಾನಿ ಮಂಜು ಸಂಸ್ಥೆಯ ಎಲ್ಲಾ ನಿರ್ದೇಶಕರು ಬೆಂಕಿಪುರ ಗ್ರಾಮದ ಎಲ್ಲಾ ಹಿರಿಯ ಮುಖಂಡರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


