ಬಂಟ್ವಾಳ: ಶ್ರೀ ಮಹಾಕಾಳಿ ದೇವಸ್ಥಾನ ಮಹಾಕಾಳಿ ಪಡ್ಪು ಸಜೀಪ ಮುನ್ನೂರಿನ ಶ್ರೀ ಕ್ಷೇತ್ರದಲ್ಲಿ ಪ್ರಾಯಶ್ಚಿತ್ತ ಶಾಂತಿ ಹೋಮ ಇಂದು (ಏ. 21) ಶ್ರದ್ಧಾ-ಭಕ್ತಿಯಿಂದ ಜರಗಿತು.

ದೇವಸ್ಥಾನದ ಅರ್ಚಕರು ವಿವಿಧ ವೈದಿಕ ವಿಧಿವಿಧಾನಗಳು ನೆರವೇರಿಸಿದರು.

ಈ ಸಂದರ್ಭದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಕೃಪೆಗೆ ಪಾತ್ರರಾಗಿ ಪ್ರಸಾದವನ್ನು ಸ್ವೀಕರಿಸಿದರು.



