Breaking
19 Sep 2026, Sat

ಜನಸಂದಣಿ ಬಸ್‌ನಲ್ಲಿ ಮಹಿಳೆಯ ಚಿನ್ನದ ಸರ ಕಳವು

ಬಂಟ್ವಾಳ: ಬಸ್‌ ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮಹಿಳೆಯೊಬ್ಬರ ಚಿನ್ನದ ಸರ ಕಳುವಾದ ಘಟನೆ ಏ. 15 ರಂದು ನಡೆದಿದೆ.

ಏ. 15 ರಂದು ಬೆಳ್ತಂಗಡಿ ತಾಲೂಕಿನ ಸರಸ್ವತಿ ಅವರು ಪೊಳಲಿಗೆ ತೆರಳಲು ಧರ್ಮಸ್ಥಳದಿಂದ ಸ್ಟೇಟ್‌ ಬ್ಯಾಂಕ್ ಗೆ ಹೋಗುವ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದರು. ಬಸ್‌ ನಲ್ಲಿ ಹೆಚ್ಚಿನ ಜನಸಂದಣಿ ಇದ್ದಿದ್ದರಿಂದ ಸರಸ್ವತಿ ಅವರು ನಿಂತೇ ಪ್ರಯಾಣಿಸುತ್ತಿದ್ದರು.

ಬಳಿಕ ಬಿ.ಸಿ.ರೋಡಿನಲ್ಲಿ ಇಳಿಯುವ ವೇಳೆ ಕುತ್ತಿಗೆಯನ್ನು ನೋಡಿದಾಗ ಚಿನ್ನದ ಸರ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ಬಸ್ಸಿನಲ್ಲಿ ಹುಡುಕಾಡಿದರೂ ಸರ ಸಿಗಲಿಲ್ಲ.

ಈ ಕುರಿತು ಮಹಿಳೆ ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳುವಾದ ಚಿನ್ನದ ಅಂದಾಜು ಮೌಲ್ಯ ಸುಮಾರು 2,50,000 ಆಗಬಹುದು ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *