Breaking
19 Sep 2026, Sat

ಮನೆಯಿಂದ ಹೊರಟ ಬಾಲಕಿ ನಾಪತ್ತೆ

ಮಂಗಳೂರು: ಮನೆಯಿಂದ ದೇವಸ್ಥಾನಕ್ಕೆ ಹೊರಟ ಬಾಲಕಿಯೊಬ್ಬಳು ನಾಪತ್ತೆಯಾದ ಘಟನೆ ಏ. 12 ರಂದು ನಡೆದಿದೆ.

ನಾಪತ್ತೆಯಾದ ಬಾಲಕಿಯನ್ನು ಜಗದೀಶ್ ಪೂಜಾರಿ ಮತ್ತು ಗುಲಾಬಿ ದಂಪತಿಯ ಪುತ್ರಿ ಚೈತನ್ಯ ಎಂದು ಗುರುತಿಸಲಾಗಿದೆ.

ಏ. 12 ರಂದು ಪೊಳಲಿ ದೇವಸ್ಥಾನಕ್ಕೆ ಹೋಗಿ ಬರುತ್ತೇನೆಂದು ತಂದೆಗೆ ತಿಳಿಸಿ ಮನೆಯಿಂದ ಹೊರಟಿದ್ದಳು. ಆದರೆ ಸಂಜೆಯಾದರೂ ಮನೆಗೆ ಮರಳಿಲ್ಲ. ಸಂಬಂಧಿಕರ ಮತ್ತು ಸ್ನೇಹಿತರ ಮನೆಗಳಲ್ಲಿ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಗದ ಹಿನ್ನಲೆಯಲ್ಲಿ ಕೊಣಾಜೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ನಾಪತ್ತೆಯಾದ ಬಾಲಕಿಯು ಸುಮಾರು 5 ಅಡಿ ಎತ್ತರ, ದಪ್ಪ ಶರೀರ, ಗೋಧಿ ಮೈಬಣ್ಣ ನಾಪತ್ತೆಯಾದ ದಿನ ನೇರಳೆ ಬಣ್ಣದ ಗೌನ್ ಮತ್ತು ಕಪ್ಪು ಕೋಟ್ ಧರಿಸಿದ್ದಳು. ಕನ್ನಡ ಹಾಗೂ ತುಳು ಭಾಷೆ ಮಾತನಾಡುತ್ತಾಳೆ.

ಚೈತನ್ಯ ಕುರಿತು ಯಾವುದೇ ಮಾಹಿತಿ ಲಭ್ಯವಿದ್ದಲ್ಲಿ ತಕ್ಷಣ ಮಂಗಳೂರು ನಗರ ನಿಯಂತ್ರಣ ಕೊಠಡಿ (0824-2220800) ಅಥವಾ ಕೊಣಜೆ ಪೊಲೀಸ್ ಠಾಣೆ (0824-2220536, 9480802350) ಸಂಪರ್ಕಿಸಲು ಕೋರಲಾಗಿದೆ.

Leave a Reply

Your email address will not be published. Required fields are marked *