Breaking
19 Sep 2026, Sat

ಎಐ–ಮಷೀನ್ ಲರ್ನಿಂಗ್ ಬಿ.ಟೆಕ್‌ನಲ್ಲಿ ಗೋಲ್ಡ್ ಮೆಡಲ್ ರಿಶಲ್ ತಾವ್ರೊಗೆ ಸನ್ಮಾನ

ಮಂಗಳೂರು: ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೂವೆ ಎಂಬ ಸಣ್ಣ ಹಳ್ಳಿಯಿಂದ ಬಂದ ರಿಶಲ್ ತಾವ್ರೊ ಅವರು ಮಂಗಳೂರಿನ ಶ್ರೀನಿವಾಸ್ ಯೂನಿವರ್ಸಿಟಿ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಕಾಲೇಜಿನಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು ಮಷೀನ್ ಲರ್ನಿಂಗ್ ವಿಭಾಗದ ಬಿ.ಟೆಕ್ ಪದವಿಯಲ್ಲಿ ಗೋಲ್ಡ್ ಮೆಡಲ್ ಪಡೆದು ಉತ್ತೀರ್ಣರಾಗಿದ್ದಾರೆ.

ಈ ಸಾಧನೆಗೆ ಸಂತಸಗೊಂಡ ತಾವ್ರೊ ಕುಟುಂಬದ ಸದಸ್ಯರು ರಿಶಲ್ ಅವರನ್ನು ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕೊಂಕಣಿ ಭಾಷಾ ಮಂಡಳ್ ಕರ್ನಾಟಕ (ರಿ) ಇದರ ಅಧ್ಯಕ್ಷರು ಹಾಗೂ ಹಿರಿಯ ಬಹುಭಾಷಾ ಸಾಹಿತಿ, ಪತ್ರಕರ್ತ ರೇಮಂಡ್ ಡಿಕೂನಾ ತಾಕೊಡೆ ಅವರು ಮಾತನಾಡಿ, ಯುವಕರಿಗೆ ಪ್ರೋತ್ಸಾಹ ಮಾಡುವುದು ಪ್ರೇರಣೆ ಪಡೆಯಲು ಮುಂದೆ ಅವರು ತಮ್ಮ ಅನುಕೂಲಕ್ಕೆ ತಕ್ಕಂತೆ ಇತರರಿಗೆ ಸಹಾಯ ಪ್ರೋತ್ಸಾಹ ನೀಡಬೇಕು. ಈಗಿನ ವಿದ್ಯಾರ್ಥಿಗಳು ಈ ತರಹ ಉತ್ತಮ ಗುಣಮಟ್ಟದ ಶಿಕ್ಷಣ ಪಡೆದು ಒಳ್ಳೆಯ ಕೆಲಸ ಮಾಡುವಾಗ ತಮ್ಮ ಊರಿನ, ಪ್ರದೇಶದ ಬಡತನದ ಮತ್ತು ಅನಾನುಕೂಲ ಇರುವವರಿಗೆ ಸಹಾಯ ಮಾಡುವ ಮನಸ್ಸು ಹೊಂದಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾವ್ರೊ ಕುಟುಂಬದ ಹಿರಿಯರಾದ ಜೋನ್ ತಾವ್ರೊ ವಹಿಸಿದ್ದರು. ರಾಜ್ಯ ಶಿಕ್ಷಕರ ಯೂನಿಯನ್‌ನ ನಿಕಟ ಉಪಾಧ್ಯಕ್ಷರಾದ ಸ್ಟೇನಿ ತಾವ್ರೊ ಕಾರ್ಯಕ್ರಮವನ್ನು ಆಯೋಜಿಸಿದರು.

ವೇದಿಕೆಯಲ್ಲಿ ರೇಮಂಡ್ ಡಿಕೂನಾ ತಾಕೊಡೆ, ಜೋನ್ ತಾವ್ರೊ, ಸ್ಟೇನಿ ತಾವ್ರೊ, ಗೋಲ್ಡ್ ಮೆಡಲಿಸ್ಟ್ ರಿಶಲ್ ತಾವ್ರೊ, ಅವರ ತಂದೆ ಜೊಸೆಫ್ ತಾವ್ರೊ ಹಾಗೂ ಅಜ್ಜ ಆ್ಯಂಟನಿ ವಾಲ್ಡರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *