Breaking
19 Sep 2026, Sat

ಫಳ್ನೀರ್‌ನಲ್ಲಿ ಕಾರು ಆಲ್ಟ್ರೇಷನ್ ಸೆಂಟರ್‌ಗೆ ಬೆಂಕಿ: ಮೂರು ಕಾರುಗಳು ಬೆಂಕಿಗಾಹುತಿ

ಮಂಗಳೂರು: ಕಾರು ಆಲ್ಟ್ರೇಷನ್ ಸೆಂಟರ್ ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಲಕ್ಷಾಂತರ ರೂಪಾಯಿ ಮೌಲ್ಯದ ಸೊತ್ತುಗಳಿಗೆ ಹಾನಿಯಾದ ಘಟನೆ ಮಂಗಳೂರಿನ ಫಳ್ನೀರ್‌ ಬಳಿ ನಡೆದಿದೆ.

ಏ. 13 ರಂದು ಮಂಗಳೂರಿನ ಫಳ್ನೀರ್‌ ಬಳಿ ಇರುವ ಆಲ್ಟ್ರೇಷನ್ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಕೆಲಸಕ್ಕಾಗಿ ಅಂಗಡಿಯೊಳಗೆ ಇರಿಸಲಾಗಿದ್ದ ಮೂರು ಕಾರುಗಳು ಬೆಂಕಿಯ ಕೆನ್ನಾಲಿಗೆಗೆ ಸಂಪೂರ್ಣವಾಗಿ ಆಹುತಿಯಾಗಿವೆ.

ಅಂಗಡಿಯಿಂದ ದಟ್ಟವಾದ ಹೊಗೆ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದ ತಕ್ಷಣ ಸ್ಥಳಕ್ಕೆ ಧಾವಿಸಿದ ಪಾಂಡೇಶ್ವರ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಘಟನೆ ಸಂಭವಿಸಿದ ವೇಳೆ ಅಂಗಡಿಯಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ರೀತಿಯ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *