Breaking
10 Apr 2026, Fri

ತಾಯಿಯ ಕನಸು ಸಾಕಾರ: ಮಗಳ ಜೊತೆಗೆ ಪಿಯುಸಿ ಉತ್ತೀರ್ಣ

ಬಂಟ್ವಾಳ: ಬಿ.ಸಿ.ರೋಡಿನ ಕೈಕಂಬ ನಿವಾಸಿಯಾದ ತಾಯಿ–ಮಗಳು ಇಬ್ಬರೂ 2025–26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.

ಗೃಹಿಣಿ ನೇತ್ರಾವತಿ ವಿ.ಆರ್ ಅವರಿಗೆ ದ್ವಿತೀಯ ಪಿಯುಸಿ ಪಾಸಾಗಬೇಕೆಂಬ ಆಸೆ ಇದ್ದು, ಈ ಸಾಲಿನ ವಾರ್ಷಿಕ ಪರೀಕ್ಷೆಗೆ ಮೊಂಟೆಪದವಿನ ಸರಕಾರಿ ಪದವಿಪೂರ್ವ ಕಾಲೇಜು ಮೂಲಕ ಹಾಜರಾಗಿದ್ದು ತಮ್ಮ ಪ್ರಥಮ ಪ್ರಯತ್ನದಲ್ಲೇ ಕಲಾ ವಿಭಾಗದಲ್ಲಿ ಉತ್ತೀರ್ಣರಾಗಿ 257 ಅಂಕಗಳನ್ನು ಗಳಿಸಿದ್ದಾರೆ.

ಇವರ ಮಗಳು ಹೇಮಶ್ರೀ ಆರ್ ಅವರು ಬಿ.ಮೂಡ ಸರಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದು, ಈ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ 562 ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದಾರೆ.

Leave a Reply

Your email address will not be published. Required fields are marked *