ಮಂಗಳೂರು: ಜೈ ಕುಂದಾಪ್ರ ಸೇವಾ ಟ್ರಸ್ಟ್ (ರಿ.) ಇವರ ದಶಮಾನೋತ್ಸವ ಸಂಭ್ರಮದ ಪ್ರಯುಕ್ತ ಪೂರ್ವಭಾವಿಯಾಗಿ ಸಮಾಜದಲ್ಲಿ ಅವಿರತವಾಗಿ ದುಡಿದು ತನ್ನ ದುಡಿತದಲ್ಲಿಯೇ ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಸಮಾಜಮುಖಿ ವ್ಯಕ್ತಿಗಳನ್ನು ಗುರುತಿಸಿ ಗೌರವಿಸುವ ಕಾರ್ಯಕ್ರಮವು ಕೋಟ ಹಾಡಿಕೆರೆ ಶ್ರೀ ಶನೀಶ್ವರ ದೇವಸ್ಥಾನದ ಸಭಾಂಗಣದಲ್ಲಿ ಸಕಡ್ ಫೌಂಡೇಶನ್ ಸಂಸ್ಥೆಯ ಪ್ರವರ್ತಕರಾದ ಕೆ. ಶ್ರೀಕಾಂತ ಶೆಣೈ ಕೋಟ ಅವರ ನೇತೃತ್ವದಲ್ಲಿ ನೆರವೇರಿತು.

ಕಳೆದ 50 ವರ್ಷಗಳಿಂದ ಕೋಟ ಪರಿಸರದಲ್ಲಿ ಐಸ್ ಕ್ರೀಮ್ ಮಾರಾಟ ಮಾಡುತ್ತಿರುವ ಸುಬ್ರಹ್ಮಣ್ಯ ಬೀಜಾಡಿ, ಕಳೆದ 30 ವರ್ಷಗಳಿಂದ ಮೆಟಡೋರ್ ಡ್ರೈವರ್ ಆಗಿ ಕೆಲಸ ನಿರ್ವಹಿಸುತ್ತಿರುವ ಅನಂತ ಪೂಜಾರಿ,
ಕಳೆದ 40 ವರ್ಷಗಳಿಂದ ಆಟೋ ಚಾಲಕರಿಗೆ ಸೇವೆ ನೀಡುತ್ತಿರುವ ಶ್ರೀ ವೆಂಕಟೇಶ್ ಪೂಜಾರಿ,
ಸುಮಾರು 58 ವರ್ಷಗಳಿಂದ ಡ್ರೈವರ್ ಆಗಿ ಕೆಲಸ ನಿರ್ವಹಿಸುತ್ತಿರುವ ಟಿ. ಕೃಷ್ಣ ಪೂಜಾರಿ, ಕಳೆದ 40 ವರ್ಷಗಳಿಂದ ಡ್ರೈವರ್ ಆಗಿ ಕೆಲಸ ನಿರ್ವಹಿಸುತ್ತಿರುವ ಕೆ. ಅಣ್ಣಯ್ಯ ಮರಕಾಲ ರವರನ್ನು ಗುರುತಿಸಿ ಗೌರವಿಸಿ ಯುವ ಪೀಳಿಗೆಗೆ ಸ್ಪೂರ್ತಿ ತುಂಬುವ ಕೆಲಸ ನೆರವೇರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಶ್ರೀಕಾಂತ ಶೆಣೈ, ಪ್ರವರ್ತಕರು ಸಕಡ್ ಫೌಂಡೇಷನ್, ಕೆ.ಭಾಸ್ಕರ್ ಸ್ವಾಮಿ ಪಾತ್ರಿಗಳು ಶ್ರೀ ಕ್ಷೇತ್ರ ಹಾಡಿಕೆರೆ, ಸುರೇಶ್ ಗಾಣಿಗ ಸ್ಥಾಪಕಾಧ್ಯಕ್ಷರು, ಪಂಚವರ್ಣ ಸಂಘಟನೆ, ತಿಮ್ಮ ಕಾಂಚನ್ ಹಿರಿಯ ಸಲಹೆಗಾರರು, ಆದಿತ್ಯ ಗೌರವ ಸಲಹೆಗಾರರು, ಜೈಕುಂದಾಪ್ರ ಸೇವಾ ಟ್ರಸ್ಟ್ (ರಿ.) ಹಾಗೂ ಪುಂಡಲೀಕ ಮೊಗವೀರ ಅಧ್ಯಕ್ಷರು, ಜೈ ಕುಂದಾಪ್ರ ಸೇವಾ ಟ್ರಸ್ಟ್(ರಿ.)ರವರು ಉಪಸ್ಥಿತರಿದ್ದರು.
ಜಯರಾಜ್ ಸಾಲ್ಯಾನ್ ಪಡುಕೆರೆ ಕಾರ್ಯಕ್ರಮ ನಿರೂಪಿಸಿದರು , ದಿವ್ಯ ಕುಂದಾಪುರ ವಂದಿಸಿದರು.



