Breaking
19 Sep 2026, Sat

ಸಜೀಪ ಮಾಗಣೆಯ ಮಿತ್ತ ಮಜಲು ಕ್ಷೇತ್ರದಲ್ಲಿ ಬಿಸು ಜಾತ್ರೆ ಭಕ್ತಿಭಾವದಿಂದ ಆರಂಭ

ಬಂಟ್ವಾಳ: ಸಜೀಪ ಮಾಗಣೆಯ ಮಿತ್ತ ಮಜಲು ಕ್ಷೇತ್ರದಲ್ಲಿ ಜರಗುವ ವಾರ್ಷಿಕ ಬಿಸು ಜಾತ್ರೆ ಅಂಗವಾಗಿ ಕೋಳಿಗುಂಟವು ಸಜೀಪ ಮಾಗಣೆ ತಂತ್ರಿ ಎಂ.ಸುಬ್ರಹ್ಮಣ್ಯ ಭಟ್ ನೇತ್ರತ್ವದಲ್ಲಿ ಸಾಮೂಹಿಕ ಪ್ರಾರ್ಥನೆಯೊಂದಿಗೆ ಸಂಪನ್ನಗೊಂಡಿತು.

ಜಾತ್ರೆಯ ಅಂಗವಾಗಿ ಏ. 12 ರಂದು ಕೊಡಿ ಚೆಂಡು ಅಗರಿಮಾಡ ಅಲಾಡಿ ಖಾನ ನೇಮೋತ್ಸವ, ಏ. 13 ರಂದು ಗ್ರೀಮಾಡ ನೇಮೋತ್ಸವ, ಏ. 14 ರಂದು ಕ್ಷೇತ್ರ ಮಿತ್ತ ಮಜಲು ಕಡೆ ಚೆಂಡು ಶ್ರೀ ದೈವಂಗಳ ವಲಸಾರಿ ಶ್ರೀ ನಾಲ್ಕೈತಾಯ ದೈವದ ಮೆಚ್ಚಿ, ಏ.15 ರಂದು ದೈವಂಗಳ ಕೆರೆ ನೇಮ, ಏ.16 ರಂದು ಶ್ರೀ ದೈವಂಗಳ ಉಡುಕು ಬಲಿ ಅನ್ನದಾನ ರಾತ್ರಿ ಪರಿವಾರ ದೈವಗಳ ನೇಮ ಜರಗಲಿದೆ.

ಈ ಸಂದರ್ಭದಲ್ಲಿ ಕಾಂತಾಡಿ ಗುತ್ತು ಗಡಿ ಪ್ರದಾನರಾದ ಗಣೇಶ್ ನಾಯಕ್ ಯಾನೆ ಉಗ್ಗ ಶೆಟ್ಟಿ, ಬಿಜಂದಾರು ಗುತ್ತು ಶಿವರಾಮ ಭಂಡಾರಿ, ಸಜೀಪ ಗುತ್ತು ಗಡಿ ಪ್ರಧಾನರಾದ ಕಾಳ ಶೆಟ್ಟಿ ಯಾನೆ ಮುತ್ತಣ್ಣ ಶೆಟ್ಟಿ, ನಗ್ರೀಗುತ್ತು ಜಯರಾಮ ಶೆಟ್ಟಿ, ನಗ್ರೀಗುತ್ತು ವಿವೇಕ ಶೆಟ್ಟಿ, ಜೀವನ್ ಆಳ್ವ, ಹರೀಶ್ ರೈ, ದೇವಿ ಪ್ರಸಾದ್ ಪೂಂಜ, ಎಸ್ ಶ್ರೀಕಾಂತ ಶೆಟ್ಟಿ, ಕೊಚ ಪೂಜಾರಿ ಯಾನೆ ಶಂಕರ ಪೂಜಾರಿ ಕುಂಜ್ಞ ಪೂಜಾರಿ ಯಾನೆ ದಯಾನಂದ ಪೂಜಾರಿ ಹಾಗೂ ಗುತ್ತು ಮನೆತನದವರು ಹಾಗೂ ಚಾಕ್ರಿ ವರ್ಗದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *