Breaking
1 Apr 2026, Wed

ಮೈಸೂರಿನ ಹೂಟಗಳ್ಳಿಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ

ಮೈಸೂರು: ಪಂಚಾಯತ್ ಗ್ರಾಮಾಭಿವೃದ್ಧಿ ಮತ್ತು ರೈತರ ಸೇವಾ ಸಮಿತಿ ಹಾಗೂ ಗ್ರಾಮ ಸಮೃದ್ಧಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ವತಿಯಿಂದ ಮಾರ್ಚ್ 31ರಂದು ಮೈಸೂರಿನ ಹೂಟಗಳ್ಳಿಯಲ್ಲಿರುವ ಕೃಷ್ಣ ಬೇಕರಿ ಆವರಣದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮಕ್ಕೆ ಯೋಗ ನರಸಿಂಹಸ್ವಾಮಿ ದೇವಸ್ಥಾನದ ಆಡಳಿತಾಧಿಕಾರಿಗಳಾದ ಶ್ರೀ ಶ್ರೀನಿವಾಸ ಗುರುಗಳು ಆಗಮಿಸಿ, ದೀಪ ಬೆಳಗುವ ಮೂಲಕ ಚಾಲನೆಯನ್ನು ನೀಡಿದರು.

ಮುಖ್ಯ ಅತಿಥಿಗಳಾಗಿ ಲಲಿತಾ ಜಿಟಿ ದೇವೇಗೌಡ, ಚಂದ್ರಿಕಾ ಸುರೇಶ್, ಭಾಗ್ಯ ಲೋಕೇಶ್, ನಾಗರತ್ನ, ಕೂರ್ಗಳ್ಳಿ ಮಹಾದಣ್ಣ ಹಾಗೂ ನಗರಸಭೆ ಸದಸ್ಯೆ ಗಿರಿಜಾ ಹಾಗೂ 9 ಮಂದಿ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು. ಅಲ್ಲದೆ, ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್. ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.

ನಂತರ ಮುಖ್ಯ ಅತಿಥಿಗಳು ಸಂಸ್ಥೆಯ ಕಾರ್ಯಚಟುವಟಿಕೆಗಳ ಬಗ್ಗೆ ಮಾತನಾಡಿದರು. ಸಂಸ್ಥೆಯ ವತಿಯಿಂದ ರಚಿಸಲಾದ ಸಂಘಗಳ ಒಕ್ಕೂಟದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳನ್ನು ಗೌರವಿಸಲಾಯಿತು. ಬಳಿಕ ಸಂಘಗಳಿಗೆ ಆಟೋಟ ಸ್ಪರ್ಧೆಗಳು ಆಯೋಜಿಸಲಾಗಿದ್ದು ಸ್ಪರ್ಧೆಯಲ್ಲಿ ಭಾಗವಹಿಸಿ ಗೆದ್ದ ಮಹಿಳೆಯರಿಗೆ ಬಹುಮಾನ ವಿತರಿಸಲಾಯಿತು.

ಹಾಗೂ ಪಂಚಾಯತ್ ಗ್ರಾಮಾಭಿವೃದ್ಧಿ ಮತ್ತು ರೈತರ ಸೇವಾ ಸಮಿತಿ ಹಾಗೂ ಗ್ರಾಮ ಸಮೃದ್ಧಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನಿರ್ದೇಶಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಸುಮಾರು 500ಕ್ಕೂ ಅಧಿಕ ಜನರು ಭಾಗವಹಿಸಿದ್ದು, ಕಾರ್ಯಕ್ರಮ ಯಶಸ್ವಿಯಾಗಿ ಮತ್ತು ಅದ್ದೂರಿಯಾಗಿ ನೆರವೇರಿತು.

Leave a Reply

Your email address will not be published. Required fields are marked *