Breaking
21 Mar 2026, Sat

ಬೆಂಜನಪದವು: ನೂತನ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರ ಲೋಕಾರ್ಪಣೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

ಬಂಟ್ವಾಳ :ತಾಲೂಕಿನ ಕಳ್ಳಿಗೆ ಗ್ರಾಮದ ಬೆಂಜನಪದವು ರಾಮನಗರದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ ರಿ ಇದರ ಅಶ್ರಯದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದ ಲೋಕಾರ್ಪಣೆ ಹಾಗೂ ಶ್ರೀ ದೇವರ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಜ.18 ಹಾಗೂ19ರಂದು ನಡೆಯಲಿದ್ದು ಇದರ ಪೂರ್ವಭಾವಿಯಾಗಿ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಡಿ. 6ರಂದು ಸಂಜೆ ಬೆಂಜನಪದವು ಶ್ರೀ ಭದ್ರಕಾಳಿ ದೇವಸ್ಥಾನದ ಸನ್ನಿದಿಯಲ್ಲಿ ನಡೆಯಿತು.

ಬೆಂಜನಪದವು ಶ್ರೀ ಭದ್ರಾಕಾಳಿ ದೇವಸ್ಥಾನದ ಧರ್ಮದರ್ಶಿ ರಮೇಶ್ ಅವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿ, ಶ್ರೀ ಅಯ್ಯಪ್ಪ ದೇವರ ಕೃಪೆಯಿಂದ ಸಮಸ್ತ ಜನರ ಕಷ್ಟ, ದೋಷಗಳು ನಿವಾರಣೆಯಾಗಿ ಸಮಾಜದಲ್ಲಿ ಸುಭಿಕ್ಷೆಯಾಗಲಿ ಹಾಗೂ ಕಾರ್ಯಕ್ರಮ ಯಶಸ್ವೀಯಾಗಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಕಳ್ಳಿಗೆ ಗ್ರಾ ಪಂ ಸದಸ್ಯೆ ರೇಷ್ಮಾ ಸತೀಶ್, ಆಡಳಿತ ಟ್ರಸ್ಟ್ ನ ಅಧ್ಯಕ್ಷ ಪ್ರವೀಣ್ ಬೆಂಜನಪದವು, ಪ್ರ.ಕಾರ್ಯದರ್ಶಿ ಸುಬ್ರಮಣ್ಯ ಭಟ್, ಕೋಶಾಧಿಕಾರಿ ದೀಲಿಪ್ ಪಕ್ಕೊಳಿಮಾರ್, ಬ್ರಹ್ಮಕಲಶ ಸಮಿತಿಯ ಪ್ರ. ಕಾರ್ಯದರ್ಶಿ ಮನೋಜ್ ಶರ್ಮ, ಮಹಿಳಾ ಸಮಿತಿಯ ಅಧ್ಯಕ್ಷೆ ಭವ್ಯ ಪ್ರವೀಣ್ ಬೆಂಜನಪದವು, ಲೋಕೇಶ್ ರಾಮನಗರ, ಗೀತಾ ದಿನೇಶ ರಾಮನಗರ,ಉದಯ ಕುಮಾರ್ ರಾಮನಗರ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *