Breaking
18 May 2026, Mon

ಯುವವಾಹಿನಿ ಡೆನ್ನಾನ ಡೆನ್ನನ 2026 – ಟೈಟಲ್ ಸಾಂಗ್ ಬಿಡುಗಡೆ

ಬಂಟ್ವಾಳ : ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏ. 19 ರಂದು ಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಲಿರುವ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ “ಡೆನ್ನಾನ ಡೆನ್ನನ 2026” ರ ಟೈಟಲ್ ಸಾಂಗ್‌ನ್ನು ಮಾ. 27 ರಂದು ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಬಿಡುಗಡೆಗೊಳಿಸಲಾಯಿತು.

ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಭುವನೇಶ್ ಪಚ್ಚಿನಡ್ಕ ಅವರು ಈ ಟೈಟಲ್ ಸಾಂಗ್ ಬಿಡುಗಡೆಗೊಳಿಸಿ ಬಳಿಕ ಮಾತನಾಡಿ, “ಯುವವಾಹಿನಿಯ ಡೆನ್ನಾನ ಕಾರ್ಯಕ್ರಮ ಅದ್ಭುತ ಯಶಸ್ಸು ಸಾಧಿಸಲಿದೆ. ಸದಸ್ಯರ ಅವಿರತ ಶ್ರಮಕ್ಕೆ ತಕ್ಕ ಫಲ ದೊರೆಯಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಯುವವಾಹಿನಿಯ 35 ಘಟಕಗಳಲ್ಲಿ ಪ್ರತಿಷ್ಠಿತ ಘಟಕವಾಗಿ ಗುರುತಿಸಿಕೊಂಡಿರುವ ಬಂಟ್ವಾಳ ಘಟಕವು ಸೃಜನಶೀಲತೆ, ಕ್ರಿಯಾಶೀಲತೆ ಹಾಗೂ ಹೊಸತನದಲ್ಲಿ ಎಲ್ಲರಿಗೂ ಮಾದರಿಯಾಗಿದೆ ಎಂದು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ಪಡ್ಪು ಶ್ಲಾಘಿಸಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ ಬಂಟ್ವಾಳ ಘಟಕದ ಅಧ್ಯಕ್ಷರಾದ ನಾಗೇಶ್ ಪೂಜಾರಿ ನೈಬೇಲು ವಹಿಸಿದ್ದರು.

ಈ ಸಂದರ್ಭದಲ್ಲಿ ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಹಾಗೂ ಡೆನ್ನಾನ ಸಂಚಾಲಕರಾದ ಶ್ರೀನಿವಾಸ ಪೂಜಾರಿ ಮೆಲ್ಕಾರ್, ರಕ್ತೇಶ್ವರೀ ದೇವಿ ದೇವಸ್ಥಾನದ ಟ್ರಸ್ಟೀ ವಿಶ್ವಾನಾಥ ಬಿ, ಬಂಟ್ವಾಳ ಉಪ ತಹಶಿಲ್ದಾರರಾದ ನವೀನ್ ಕುಮಾರ್, ವಕೀಲರು ಚಿದಾನಂದ ಕಡೇಶಿವಾಲಯ, ತುಂಬೆ ಬಿಲ್ಲವ ಸಂಘದ ಅಧ್ಯಕ್ಷರಾದ ಗಣೇಶ್ ಸುವರ್ಣ ತುಂಬೆ, ಯುವವಾಹಿನಿ ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ಸುರೇಶ್ ಪೂಜಾರಿ, ಪ್ರಧಾನ ಕಾರ್ಯದರ್ಶಿ ರೇಖಾ ಗೋಪಾಲ್, ಜತೆ ಕಾರ್ಯದರ್ಶಿ ಹರೀಶ್ ಕೋಟ್ಯಾನ್ ಕುದನೆ, ಸಾಂಸ್ಕೃತಿಕ ನಿರ್ದೇಶಕರಾದ ದಿನೇಶ್ ಸುವರ್ಣ ರಾಯಿ, ಪ್ರಚಾರ ನಿರ್ದೇಶಕ ಶಿವಪ್ರಸಾದ್ ನೂಚಿಲ, ಸಾಮಾಜಿಕ ಜಾಲತಾಣ ಸಂಪಾದಕ‌ ಮಂಡಳಿ ಸದಸ್ಯರಾದ ಭವಾನಿ ಕೆ, ಸಂಘಟನಾ ಕಾರ್ಯದರ್ಶಿ ನಾಗೇಶ್ ಪೂಜಾರಿ ಮಾಣಿ, ನಿರಂಜನ್ ಬಜಪೆ ನಾಮ ನಿರ್ದೇಶನ ಸದಸ್ಯರಾದ ನವೀನ್ ಕಾರಾಜೆ, ಬಂಟ್ವಾಳ ಘಟಕದ ಕಾರ್ಯದರ್ಶಿ ಮಧುಸೂದನ್ ಮದ್ವ, ಜೊತೆ ಕಾರ್ಯದರ್ಶಿ ಲೋಹಿತ್ ಕನಪಾದೆ, ಉಪಾಧ್ಯಕ್ಷರಾದ ನಿಕೇಶ್ ಕೋಟ್ಯಾನ್, ಸಾಂಸ್ಕೃತಿಕ ನಿರ್ದೇಶಕರಾದ ಶೈಲೇಶ್ ಕುಚ್ಚಿಗುಡ್ಡೆ, ಡೆನ್ನಾನ ಸಹ ಸಂಚಾಲಕರಾದ ಸತೀಶ್ ಬಾಯಿಲ, ಉದಯ ಮೇನಾಡು, ಮಲ್ಲಿಕಾ ಪಚ್ಚಿನಡ್ಕ, ಸತೀಶ್ ಪೂಜಾರಿ ಕೊಪ್ಪರಿಗೆ ಮಾಜಿ ಅಧ್ಯಕ್ಷರಾದ ಬಿ ಶ್ರೀಧರ್ ಅಮೀನ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *