ಉಡುಪಿ: ಮಣಿಪಾಲದ ಆತ್ರಾಡಿ ಸಮೀಪದ ಕಬ್ಯಾಡಿಯ ಅರ್ಮನ್ ಕಾರ್ಖಾನೆ ಬಳಿ ಟೆಂಪೋ ಮತ್ತು ಬೈಕ್ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ, ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು (ಮಾ. 23) ನಡೆದಿದೆ.

ಮೃತಪಟ್ಟವರನ್ನು ಹೆರ್ಗಾ ಗ್ರಾಮದ ಭಾಸ್ಕರ್ ನಾಯಕ್ (70) ಎಂದು ಗುರುತಿಸಲಾಗಿದೆ.

ಆತ್ರಾಡಿಯಿಂದ ಮೂಡುಬೆಳ್ಳೆ ಕಡೆಗೆ ಸಾಗುತ್ತಿದ್ದ ಟೆಂಪೋ ಮತ್ತು ಎದುರು ದಿಕ್ಕಿನಿಂದ ಬರುತ್ತಿದ್ದ ಬೈಕ್ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದೆ.

ಅಪಘಾತದ ತೀವ್ರತೆಗೆ ಬೈಕ್‌ನಲ್ಲಿದ್ದ ಇಬ್ಬರು ರಸ್ತೆಗೆ ಬಿದ್ದಿದ್ದು ಇವರಲ್ಲಿ ಗಂಭೀರವಾಗಿ ಗಾಯಗೊಂಡ ಭಾಸ್ಕರ್ ನಾಯಕ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.





