ಬಂಟ್ವಾಳ: ಶ್ರೀ ಸದಾಶಿವ ದೇವಸ್ಥಾನ ಈಶ್ವರ ಮಂಗಳ ಸಜೀಪ ಮೂಡ ಇಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ ಪ್ರತಿಷ್ಠಾಪನಾ ದಿನಾಚರಣೆ ನಡೆಯಿತು.

ಬ್ರಹ್ಮಶ್ರೀ ನಿಲೇಶ್ವರ ಉಚ್ಚಿಲ ತಾಯ ಪದ್ಮನಾಭತಂತ್ರಿಗಳ ನೇತೃತ್ವದಲ್ಲಿ ಪುಣ್ಯಹ ಪಂಚಗವ್ಯ ಗಣ ಯಾಗ, ಸಾನಿಧ್ಯ ಕಲಶ ಅಭಿಷೇಕ ಫಲ ಪಂಚಾಮೃತ ಅಭಿಷೇಕ ಪ್ರಸನ್ನ ಪೂಜೆ ಕಲ್ಲುರ್ಟಿ ಪಂಜುರ್ಲಿ, ಗುಳಿಗ ದೈವಕ್ಕೆ ಪರ್ವ ಸೇವೆ, ಶಿವ ರಂಜನಿ ಭಜನಾ ತಂಡ ಬೊಕ್ಕಸ ಇವರಿಂದ ಭಜನೆ ಹಾಗೂ ಅನ್ನದಾನ ನಡೆಯಿತು.

ವಿಶ್ವ ಭಾರತಿ ಯಕ್ಷ ಸಂಜೀವಿನಿ (ರಿ.) ಮಡಿಪು ಇವರಿಂದ ಪ್ರಶಾಂತ ಹೊಳ್ಳ ಸಾರಥ್ಯಲ್ಲಿ ಸುಧನ್ಮ ಮೋಕ್ಷ ತಾಳ ಮದ್ದಳೆ ಜರಗಿತು. ನಂತರ ರಂಗ ಪೂಜೆ, ದೇವರ ಬಲಿ, ಉತ್ಸವ ವಸಂತ ಕಟ್ಟೆ ಪೂಜೆ, ರಾಜಾಂಗಣ ಪ್ರಸಾದ, ನೃತ್ಯ ಬಲಿ ಮಂತ್ರಾಕ್ಷತೆ ಮಹಾಪೂಜೆಯೊಂದಿಗೆ ಉತ್ಸವ ಸಂಪನ್ನವಾಯಿತು.

ಈ ಸಂದರ್ಭದಲ್ಲಿ ಸಜೀಪ ಮಾಗಣೆ ತಂತ್ರಿ ಎಂ.ಸುಬ್ರಹ್ಮಣ್ಯ ಭಟ್, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಗಿರೀಶ್ ಕುಮಾರ್ ಪೆರ್ವ, ಸಜೀಪ ಮೂಡ ಪಂಚಾಯಿತಿ ಮಾಜಿ ಅಧ್ಯಕ್ಷ ದೇವಿ ಪ್ರಸಾದ್ ಪೂಂಜಾ, ಶ್ರೀ ಕ್ಷೇತ್ರ ನಂದಾವರ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆ. ಪ್ರಭಾಕರ ಶೆಟ್ಟಿ, ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಸಜೀಪ ನಡು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳ್ಳಂಜ ವೆಂಕಟೇಶ್ವರ ಭಟ್, ಜಯಶಂಕರ ಭಾಶ್ರೀತಾಯ, ಶ್ರೀಕಾಂತ ಶೆಟ್ಟಿ, ಶಾಂತಿ ರಾಜ ರೈ, ಬಾಲಕೃಷ್ಣ ಅರಸ, ಸುಧಾಕರ, ರವಿ ಪಂಬದ, ಪುರಂದರ, ಕೆ ಸದಾನಂದ ಶೆಟ್ಟಿ, ಸುಧಾಕರ ಕೆಟಿ, ವೆಂಕಟರಮಣ ಮಿತೋಟ, ಮೊದಲಾದವರು ಉಪಸ್ಥಿತರಿದ್ದರು.





