ಬಂಟ್ವಾಳ: ಮಾರ್ನಬೈಲ್ ಸಿರಿಮುಡಿ ಕಾಂಪ್ಲೆಕ್ಸ್ ನಲ್ಲಿ ನೂತನವಾಗಿ ಆರಂಭ ಗೊಂಡ ಸ್ಟೈಲ್ ಲ್ಯಾಬ್ ಬ್ಯೂಟಿ ಪಾರ್ಲರ್ ಶುಭಾರಂಭಗೊಂಡಿದೆ.

ಭಾರತೀಯ ಗಡಿ ಭದ್ರತಾ ಪಡೆಯ ಮುಖ್ಯಸ್ಥರಾಗಿದ್ದ ನಿವೃತ್ತ ಸೇನಾನಿ, ಪಶ್ಚಿಮ ಸ್ಟಾರ್, ಸೇನಾ ಸಿಂಧೂರ, ಸಂಗಮ ಪ್ರಶಸ್ತಿ ಪುರಸ್ಕೃತ ಶ್ರೀ ಬಿ. ಚಂದಪ್ಪ ಮೂಲ್ಯರವರಿಂದ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು. ಡಾ.ತ್ರಿವೇಣಿ ಅವರು ರಿಬ್ಬನ್ ಕಟ್ ಮಾಡುವ ಮೂಲಕ ಪಾರ್ಲರ್‌ಗೆ ಚಾಲನೆ ನೀಡಿದರು.

ನೂತನ ಉದ್ಯಮಕ್ಕೆ ಪಂಚ ಭಾಷಾ ತಾರ ನಟ ಸುಮನ್ ತಲ್ವಾರ್, ಹಿರಿಯರು, ಸಂಘ ಸಂಸ್ಥೆಗಳ ಪ್ರಮುಖರು ಹಾಗೂ ಹಿತೈಷಿಗಳು ಭಾಗವಹಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಗೋಕುಲ್ ದಾಸ್ ನಾಯಕ್, ಮಂಗಳೂರು ಮಹಿಳಾ ಅಭಿವೃದ್ಧಿ ಕೇಂದ್ರದ ಜಿಲ್ಲಾ ಅಭಿವೃದ್ಧಿ ಮೇಲ್ವಿಚಾರಕಿ ಚಂದ್ರಿಕಾ ನಾಯಕ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿಯಾದ ಶಂಕುತಲಾ ಅಣಿಯೂರು ಉಪಸ್ಥಿತರಿದ್ದರು.

ಸ್ಟೈಲ್ ಲ್ಯಾಬ್ ನ ಮಾಲಕರಾದ ಶೋಭಾ ಜಯಪ್ರಕಾಶ್ ಕುಡು ಮುನ್ನೂರು ಕಾರಜೆರವರು ಎಲ್ಲರನ್ನೂ ಸ್ವಾಗತಿಸಿದರು. ಶ್ರೀ ಜಯಪ್ರಕಾಶ್ ಬಂಗೇರ (ಯು. ಎಸ್. ಎ) ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.





