Breaking
25 Sep 2026, Fri

ಆಲ್ ಇಂಡಿಯಾ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ಬಂಟ್ವಾಳದ ಪೂರ್ವಿ ಜೆ. ಬಂಗೇರ ಅವರು ಕರಾಟೆ ಕಟಾ ವಿಭಾಗದಲ್ಲಿ ಪ್ರಥಮ, ಕುಮಿತೆಯಲ್ಲಿ ದ್ವಿತೀಯ

ಬಂಟ್ವಾಳ: ಮಂಗಳೂರಿನ ಕಂಕನಾಡಿಯ ಫಾದರ್ ಮುಲ್ಲರ್ ಇಂಡೋರ್ ಸ್ಟೇಡಿಯಂನಲ್ಲಿ ನಡೆದ 21ನೇ ಆಲ್ ಇಂಡಿಯಾ ಓಪನ್ ಕರಾಟೆ ಚಾಂಪಿಯನ್‌ಶಿಪ್–2025ರಲ್ಲಿ ಪೂರ್ವಿ ಜೆ. ಬಂಗೇರ ದಾಸಕೋಡಿ ಅವರು 14 ವರ್ಷದ ಬಾಲಕಿಯರ ವಿಭಾಗದಲ್ಲಿ ಸ್ಪರ್ಧಿಸಿ ಕರಾಟೆಯ ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನ ಹಾಗೂ ಕುಮಿತೆ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಪೂರ್ವಿ ಜೆ. ಬಂಗೇರ ಅವರು ಜಯ ಗಣೇಶ್ ಬಂಗೇರ ದಶಕೋಡಿ ಮತ್ತು ಜಯಶ್ರೀ ಜೆ. ಬಂಗೇರ ದಂಪತಿಯ ಪುತ್ರಿಯಾಗಿದ್ದು, ಬೊಂಡಾಲದ ಶ್ರೀ ಜಗನ್ನಾಥ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢಶಾಲೆಯ 9ನೇ ತರಗತಿಯ ವಿದ್ಯಾರ್ಥಿನಿಯಾಗಿದ್ದಾರೆ. ಎಂ. ಸಮೀಕ್ಷಾ ಅವರು ಕರಾಟೆ ಗುರುಗಳಾಗಿದ್ದಾರೆ.

Leave a Reply

Your email address will not be published. Required fields are marked *