ಸಿದ್ದಕಟ್ಟೆ: ಕುಪ್ಪೆಟ್ಟು ಪಂಜುರ್ಲಿ ಮೂಲ ದೈವಸ್ಥಾನ, ಕುಪ್ಪೆಟ್ಟು ಬರ್ಕೆ ಬಂಟ್ವಾಳ ತಾಲೂಕು ಇಲ್ಲಿ ದೈವಗಳ ಪುನರ್ ಪ್ರತಿಷ್ಠೆ ಮಹೋತ್ಸವದ ಸಮಾಲೋಚನಾ ಸಭೆ ಕುಪ್ಪೆಟ್ಟು ಬರ್ಕೆಯಲ್ಲಿ ನಡೆಯಿತು.
ಫೆಬ್ರವರಿ 18ರಿಂದ ದೈವಗಳ ಪುನರ್ ಪ್ರತಿಷ್ಠಾಪನೆ ನಡೆಯಲಿದ್ದು ಈ ಬಗ್ಗೆ ಸಮಾಲೋಚನಾ ಸಭೆಯು ಸಮಿತಿಯ ಅಧ್ಯಕ್ಷರಾದ ಭುವನೇಶ್ ಪಚ್ಚಿನಡ್ಕ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪ್ರಭಾಕರ ಪ್ರಭು ಹಾಗೂ ಟ್ರಸ್ಟ್ ಅಧ್ಯಕ್ಷ ಹರೀಶ್ ಪೂಜಾರಿ ಕುಪ್ಪೆಟ್ಟು ಇವರ ಉಪಸ್ಥಿತಿಯಲ್ಲಿ ನಡೆಯಿತು.
ದೈವಸ್ಥಾನದ ಶೇಕಡಾ 75ರಷ್ಟು ಕೆಲಸಕಾರ್ಯಗಳು ಮುಗಿದಿದ್ದು ಮುಂದಿನ ಕೆಲಸ ಕಾರ್ಯವೂ ಆದಷ್ಟು ಶೀಘ್ರವಾಗಿ ನಡೆಸುವ ಬಗ್ಗೆ ಸಮಾಲೋಚನೆ ನಡೆಸಲಾಯಿತು. ಪುನರ್ ಪ್ರತಿಷ್ಠೆ ಮಹೋತ್ಸವದ ಸಮಿತಿಯ ರಚನೆ ಮಾಡಿ ಪ್ರಾಮುಖ್ಯ ವಿಷಯಗಳ ಬಗ್ಗೆ ಚರ್ಚಿಸಲಾಯಿತು.ತುಳುನಾಡಿನಾದ್ಯಂತ ಕುಪ್ಪೆಟ್ಟು ಪಂಜುರ್ಲಿ ದೈವಾರಾಧಕರಿಗೆ ಪ್ರತಿಯೊಬ್ಬರಿಗೂ ಮೂಲಸ್ಥಾನದ ಪುನರ್ ಪ್ರತಿಷ್ಠೆಯ ಆಮಂತ್ರಣ ತಲುಪಿಸುವ ಕೆಲಸ ಕಾರ್ಯ ನಡೆದು ಎಲ್ಲರೂ ಈ ಕಾರ್ಯದಲ್ಲಿ ಪಾಲ್ಗೊಳ್ಳುವ ಬಗೆಯಲ್ಲಿ ಮಹತ್ವ ನಿರ್ಧಾರ ಮಾಡಲಾಯಿತು.
ಹಲವಾರು ಭಕ್ತರು ದೈವಸ್ಥಾನದ ಪುನರ್ ಪ್ರತಿಷ್ಠೆ ಗೆ ವಸ್ತು ರೂಪದಲ್ಲಿ ಹಾಗೂ ಆರ್ಥಿಕ ಧನ ಸಹಾಯ ನೀಡಿದ್ದು ಇನ್ನು ಮುಂದಕ್ಕೆ ಪೂರ್ಣಗೊಳಿಸಲು ಇನ್ನೂ ಆರ್ಥಿಕ ಕ್ರೋಡಿಕರಣದ ಅಗತ್ಯವಿದ್ದು ಎಲ್ಲರೂ ಸಹಕರಿಸುವಂತೆ ಮನವಿ ಮಾಡಲಾಯಿತು. ಅಧ್ಯಕ್ಷರಾದ ಭುವನೇಶ್ ಪಚ್ಚಿನಡ್ಕ, ಪ್ರಭಾಕರ ಪ್ರಭು,ಪ್ರಚಾರ ಸಮಿತಿಯ ದಿನೇಶ್ ಸುವರ್ಣ ರಾಯಿ ಅಲ್ಲದೇ ಜಗದೀಶ್ ಕೊಯಿಲ, ಸತೀಶ್ ಪೂಜಾರಿ ಮಠ, ಸತೀಶ್ ಪೂಜಾರಿ ಅಲಕ್ಕೆ, ದೇವಪ್ಪ ಕರ್ಕೇರ ಮಾತನಾಡಿ ಪುನರ್ ಪ್ರತಿಷ್ಟಾ ಕಾರ್ಯ ಯಶಸ್ವಿಯಾಗುವಲ್ಲಿ ಎಲ್ಲರ ಸಹಕಾರವನ್ನು ಯಾಚಿಸಿದರು.
ಈ ಸಂದರ್ಭದಲ್ಲಿ ಶೇಖರ್ ಪೂಜಾರಿ ಅಗಲ್ತೊಡಿ, ದಾಮೋದರ ಗಾಡಿಪಲ್ಕೆ, ಉಮೇಶ್ ಹಿಂಗಾಣಿ, ಮಹಾಬಲ ಕುಪ್ಪೆಟ್ಟು, ಅರುಣಾ ವಿಶ್ವನಾಥ ದೋಟ , ಕುಪ್ಪೆಟ್ಟು ಬರ್ಕೆ ಮನೆಯವರು, ಕುಟುಂಬಸ್ಥರು ಹಾಗೂ ಊರ ಭಕ್ತರು ಉಪಸ್ಥಿತರಿದ್ದರು.