Breaking
23 Dec 2024, Mon

ನೆತ್ತರಕೆರೆ ‘ಗ್ರಾಮ ವಿಕಾಸ ಪ್ರತಿಷ್ಠಾನದ ಅಶ್ರಯದಲ್ಲಿ ಸಾಮೂಹಿಕ ಶನೈಶ್ಚರ ಪೂಜೆ, ಧಾರ್ಮಿಕ ಸಭೆ

ಬಂಟ್ವಾಳ :ಎಲ್ಲರಿಗೂ ಒಳಿತು ಮಾಡುವ ಧರ್ಮವೊಂದಿದ್ದಾರೆ ಅದು ಹಿಂದೂ ಧರ್ಮ, ವಿಶಾಲ ದೃಷ್ಟಿಕೋನವಿರುವ ಹಿಂದೂ ಸಮಾಜಕ್ಕೆ ಸಾವಿರಾರು ವರುಷಗಳ ಇತಿಹಾಸ ಇದೆ, ಶ್ರೀ ರಾಮನನ್ನು ಆದರ್ಶವಾಗಿಟ್ಟುಕೊಂಡು ಗ್ರಾಮ ವಿಕಾಸದ ಮೂಲಕ ರಾಮ ರಾಜ್ಯದ ಕನಸು ಸಕಾರಗೊಳಿಸೋಣ ಈ ಪುಣ್ಯ ಭೂಮಿ ನಮ್ಮದು, ಇಲ್ಲಿ ಜಾತಿ, ವರ್ಣ, ಸಂಪತ್ತು ಇವೆಲ್ಲವನ್ನೂ ಮೀರಿ ನಿಂತು ನಮ್ಮ ಸಮಾಜವು ಇನ್ನಷ್ಟು ಬಲಗೊಳ್ಳಲು ಹಾಗೂ ಬದಲಾವಣೆಗೆ ಶನಿ ಪೂಜೆಯಂತ ಧಾರ್ಮಿಕ ಕಾರ್ಯಕ್ರಮಗಳು ಪ್ರೇರಣೆಯಾಗಲಿ ಶನಿ ದೇವರು ನಮ್ಮಲ್ಲಿರುವ ಕೆಡುಕನ್ನು ಅಳಿಸಿ ಒಳಿತನ್ನು ಮಾಡಲಿ, ಎಂದು ಅರ್ ಎಸ್ ಎಸ್ ಮುಖಂಡ ಡಾ ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.

ಅವರು ಗ್ರಾಮ ವಿಕಾಸ ಪ್ರತಿಷ್ಠಾನ ಹಾಗೂ ಶನೈಶ್ಚರ ಪೂಜಾ ಸೇವಾ ಸಮಿತಿ ನೆತ್ತರಕೆರೆ ಇದರ ಆಶ್ರಯದಲ್ಲಿ ನ. 30ರಂದು ಶನಿವಾರ ಸಂಜೆ ನಡೆದ ಸಾಮೂಹಿಕ ಶನೈಶ್ಚರ ಪೂಜೆಯ ಪ್ರಯುಕ್ತ ನಡೆದ ಧಾರ್ಮಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮ ಅಧ್ಯಕ್ಷತೆಯನ್ನು ದ ಕ ಜಿಲ್ಲಾ ಕೊಟ್ಟಾರಿ ಸಮಾಜದ ಸುಧಾರಕ ಸಂಘದ ಅಧ್ಯಕ್ಷ ಮಹಾಬಲ ಕೊಟ್ಟಾರಿ ವಹಿಸಿ, ಹಿಂದೂ ಧರ್ಮದ ಧಾರ್ಮಿಕ ಆಚಾರ ವಿಚಾರಗಳನ್ನು ಅರಿತು ಬಾಳಿದರೆ ನಮ್ಮ ಸಮಾಜವನ್ನು ಇನ್ನಷ್ಟು ಗಟ್ಟಿಗೊಳ್ಳುತ್ತದೆ ಎಂದು ಹೇಳಿ ಶುಭ ಹಾರೈಸಿದರು.

ವೇದಿಕೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮಂಗಳೂರು ವಿಭಾಗ ಗ್ರಾಮ ವಿಕಾಸ ಸಂಯೋಜಕ ಜೀತೆಂದ್ರ ಪ್ರತಾಪನಗರ, ಬಂಟ್ವಾಳ ತಾಲೂಕು ಮಾನ್ಯ ಸಂಘ ಚಾಲಕ ಡಾ ಬಾಲಕೃಷ್ಣ, ಶನೈಶ್ಚರ ಪೂಜಾ ಸೇವಾ ಸಮಿತಿಯ ಅಧ್ಯಕ್ಷ ರಘುನಾಥ ಸಪಲ್ಯ, ಗ್ರಾಮ ವಿಕಾಸ ಪ್ರತಿಷ್ಠಾನ ನೆತ್ತರಕೆರೆ ಇದರ ಸಂಯೋಜಕ ಸಂತೋಷ್ ಕುಮಾರ್ ನೆತ್ತರಕೆರೆ ಉಪಸ್ಥಿತರಿದ್ದರು.

ಪತ್ರಕರ್ತ ಸಂತೋಷ್ ಕುಲಾಲ್ ನೆತ್ತರಕೆರೆ ಸ್ವಾಗತಿಸಿ,ಸಮಿತಿಯ ಕಾರ್ಯದರ್ಶಿ ವಿದ್ಯಾರಾಜ್ ಕಾಪಿಕಾಡ್ ಧನ್ಯವಾದವಿತ್ತರು, ಸಂಘಟಕ ದಾಮೋದರ ನೆತ್ತರಕೆರೆ ಕಾರ್ಯಕ್ರಮ ನಿರೂಪಿಸಿದರು.ಬೆಳಿಗ್ಗೆ ವೇದಮೂರ್ತಿ ಮುರಳಿ ಭಟ್ ಕಲ್ಲತಡಮೆ ಪೌರೋಹಿತ್ಯದಲ್ಲಿ ಭಾಗ್ಯ ಸೂಕ್ತ ಹೋಮ ಹಾಗೂ ಐಕ್ಯಮತ್ಯ ಹೋಮ ನಡೆಯಿತು.

ರಾತ್ರಿ ಅನ್ನಸಂತರ್ಪಣೆ ನಡೆದು ಬಳಿಕ ಬೆಂಕಿನಾತೇಶ್ವರ ಮೇಳ ಕಳವಾರು ಬಾಳ ಇವರಿಂದ ಸಪ್ತ ಜಲದುರ್ಗಾ ಮಹಾತ್ಮೆ ಎಂಬ ಯಕ್ಷಗಾನ ಬಯಲಾಟ ನಡೆಯಿತು.ಶನಿ ಪೂಜಾ ಕಾರ್ಯಕ್ರಮದ ಪೂರ್ವಭಾವಿಯಾಗಿ ಶ್ರೀ ಕ್ಷೇತ್ರ ಪೊಳಲಿಗೆ ಪಾದಯಾತ್ರೆ ಮೂಲಕ ತೆರಳಿ ಚಂಡಿಕಾ ಹೋಮ ನಡೆಸಲಾಯಿತು ಹಾಗೂ ಎಂಟು ದಿವಸಗಳ ಕಾಲ ಶ್ರೀ ಶ್ರೀ ರಾಘವೇಂದ್ರ ತೀರ್ಥ ಸ್ವಾಮೀಜಿ ಬನ್ನಂಜೆ ಇವರ ದಿವ್ಯ ಉಪಸ್ಥಿತಿ ಹಾಗೂ ಮಾರ್ಗದರ್ಶನದಲ್ಲಿ ಎಳ್ಳುಗಂಟು ದೀಪೋತ್ಸವ ನಡೆಯಿತು.

Leave a Reply

Your email address will not be published. Required fields are marked *