Breaking
21 Jun 2026, Sun

ಕಟಪಾಡಿ -ಮೂಡಬಿದ್ರಿ -ಬಂಟ್ವಾಳ ಉಳ್ಳಾಲ ಅಬ್ಬಕ್ಕ ಸರ್ಕಲ್ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೆ ಏರಿಸಲು ಮನವಿ: ಪ್ರಭಾಕರ ಪ್ರಭು

ಬಂಟ್ವಾಳ: ಕಟಪಾಡಿ -ಮೂಡಬಿದ್ರಿ -ಬಂಟ್ವಾಳ ಉಳ್ಳಾಲ ಅಬ್ಬಕ್ಕ ಸರ್ಕಲ್ ರಸ್ತೆಯು (ಎಸ್ .ಎಚ್ 300) ರಾಜ್ಯ ಹೆದ್ದಾರಿಯಾಗಿದ್ದು ಕಟಪಾಡಿಯಿಂದ ಪ್ರಾರಂಭಗೊಂಡು ಕಾರ್ಕಳ ಮಾರ್ಗವಾಗಿ ಮೂಡಬಿದ್ರಿ, ಸಿದ್ದಕಟ್ಟೆ, ಬಂಟ್ವಾಳ ಮಾರ್ಗವಾಗಿ ಮೆಲ್ಕಾರ್, ಮುಡಿಪು ಮೂಲಕ ಉಳ್ಳಾಲ ಅಬ್ಬಕ್ಕ ಸರ್ಕಲ್ ವರೆಗಿನ ರಾಜ್ಯ ಹೆದ್ದಾರಿಯಲ್ಲಿ ದಿನಂಪ್ರತಿ ಲಕ್ಷಾಂತರ ವಾಹನಗಳು ಸಂಚರಿಸುತ್ತಿದ್ದು ರಸ್ತೆಯು ಅಲ್ಲಲ್ಲಿ ತಿರುವುಗಳಿಂದ ಕೂಡಿದ್ದು ವಾಹನಗಳ ಸಂಚಾರಕ್ಕೆ ಬೇಕಾದಷ್ಟು ಅಗಲೀಕರಣ ಇರುವುದಿಲ್ಲ. ಈ ರಸ್ತೆಯು ಈ ಹಿಂದೆ ಎರಡು ಬಾರಿ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೆ ಏರಿಸುವ ಕುರಿತು ಕೇಂದ್ರ ಸಚಿವರಾದ ನಿತಿನ್ ಗಡ್ಕರಿಯಿಂದಲೂ ಘೋಷಣೆಗೊಂಡು ಶಂಕು ಸ್ಥಾಪನೆ ಸಹ ಆಗಿರುತ್ತದೆ ಎಂದು ತಿಳಿದು ಬಂದಿದೆ.

ತದನಂತರ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಆಸಕ್ತಿ ವಹಿಸದೇ ಇರುವುದರಿಂದ ರಾಷ್ಟ್ರೀಯ ಹೆದ್ದಾರಿ ಘೋಷಣೆ ಅನುಷ್ಟಾನಕ್ಕೆ ಬಾರದೇ ರಾಜ್ಯ ಹೆದ್ದಾರಿಯಾಗಿಯೇ ಮುಂದುವರಿದಿರುತ್ತದೆ. ಈ ರಾಜ್ಯ ಹೆದ್ದಾರಿ (ಎಸ್ .ಎಚ್ 300) ಯಲ್ಲಿ ಮುಖ್ಯವಾಗಿ ಬಂಟ್ವಾಳ ಮೂಡಬಿದ್ರಿ ರಸ್ತೆಯು ತುಂಬಾ ಕಿರಿದಾಗಿದ್ದು, ಅಲಲ್ಲಿ ತುಂಬಾ ತಿರುವುಗಳು ಇರುವುದರಿಂದ ಸುಗಮ ಮತ್ತು ವೇಗ ಸಂಚಾರಕ್ಕೆ ಆಡಚಣೆಯಾಗಿದೆ.

ಈ ಎಲ್ಲಾ ಹಿನ್ನಲೆಯಲ್ಲಿ ಕಟಪಾಡಿ –ಉಳ್ಳಾಲ ಅಬ್ಬಕ್ಕ ಸರ್ಕಲ್ ರಾಜ್ಯ ಹೆದ್ದಾರಿ (ಎಸ್.ಎಚ್ 300) ಯನ್ನು ರಾಷ್ಟ್ರೀಯ ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೆ ಏರಿಸುವರೇ ಸಂಬಂಧಪಟ್ಟ ಕೇಂದ್ರ ಸಚಿವರಿಗೆ ಮನವರಿಕೆ ಮಾಡಿಸಿ ಆದೇಶ ಹೊರಡಿಸಬೇಕಾಗಿ ಮಂಗಳೂರು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮಾನ್ಯ ಲೋಕಸಭಾ ಸದಸ್ಯರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಿಗೆ ಸಿದ್ಧಕಟ್ಟೆಯ ಸಂಗಬೆಟ್ಟು ಗ್ರಾಮದ ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಪ್ರಭಾಕರ ಪ್ರಭು ವಿನಂತಿಸಿಕೊಂಡಿದ್ದಾರೆ .

Leave a Reply

Your email address will not be published. Required fields are marked *