Breaking
5 Aug 2026, Wed

ದಕ್ಷಿಣ ಏಷ್ಯಾ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದ ಜಯಲಕ್ಷ್ಮೀ ಗಾಣಿಗ ಅವರಿಗೆ ಸನ್ಮಾನ

ಬಂಟ್ವಾಳ: ತಾಲೂಕಿನ ಕ್ರೀಡಾಪಟು ಜಯಲಕ್ಷ್ಮಿ ಗಾಣಿಗ ಕಡೇಶ್ವಾಲ್ಯ ಇವರು ಇತ್ತೀಚೆಗೆ ನಡೆದ ದಕ್ಷಿಣ ಏಷ್ಯಾ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಭಾರತೀಯ ಮಹಿಳಾ ತಂಡದ ನಾಯಕಿಯಾಗಿ ಪ್ರಥಮ ಸ್ಥಾನ ಗೆದ್ದು ಚಿನ್ನದ ಪದಕ ಗಳಿಸಿದ ಇವರನ್ನು ಮಾಜಿ ಸಚಿವ ಬಿ.ರಮಾನಾಥ ರೈ ಮತ್ತು ಶೈಲಜಾ ಆರ್.ರೈ ದಂಪತಿ ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಸಹೋದರ ಅಶೋಕ್ ಗಾಣಿಗ, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಉಮೇಶ್ ಬೋಳಂತೂರು, ದೇಹದಾಢ್ರ್ಯ ಪಟು ಗಣೇಶ್ ಪೂಜಾರಿ, ಎಂಪಿಎಂಸಿ ಮಾಜಿ ಸದಸ್ಯ ಚಂದ್ರಶೇಖರ ರೈ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *