Breaking
21 Apr 2026, Tue

ಅಕ್ರಮ ಜಾನುವಾರು ಸಾಗಾಟ : ವಾಹನ ವಶಕ್ಕೆ

ಬಂಟ್ವಾಳ: ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಂಟ್ವಾಳ ತಾಲೂಕಿನ ಕೊಳ್ನಾಡು ಗ್ರಾಮದ ಕರೈ ಎಂಬಲ್ಲಿ ರಸ್ತೆ ಬದಿಯಲ್ಲಿ ನಿಂತಿದ್ದ ವಾಹನವೊಂದನ್ನು ಗಮನಿಸಿದ ವಿಟ್ಲ ಪೊಲೀಸರು ಚಾಲಕರಾದ ನವೀನ ಮತ್ತು ಚೇತನ್ ಅವರನ್ನು ವಿಚಾರಣೆ ನಡೆಸಿದರು. ವಾಹನದಲ್ಲಿ ಎರಡು ದನಗಳನ್ನು ಹಿಂಸಾತ್ಮಕವಾಗಿ ತುಂಬಿಸಿ ಸಾಗಾಟ ಮಾಡುತ್ತಿರುವುದು ಕಂಡುಬಂದಿದೆ.

ವಿಚಾರಣೆ ವೇಳೆ ಮಂಡ್ಯ ಜಿಲ್ಲೆಯ ನಿವಾಸಿಗಳಾದ ನವೀನ ಮತ್ತು ಚೇತನ್ ಅವರು, ಚನ್ನರಾಯಪಟ್ಟಣದ ಶಂಕರ ಎಂಬವರು ಸಾಲೆತ್ತೂರಿನ ಶಾಫಿ ಎಂಬವರಿಗೆ ಜಾನುವಾರುಗಳನ್ನು ವಧೆ ಮಾಡಿ ಮಾಂಸವಾಗಿ ಮಾರಾಟ ಮಾಡುವ ಉದ್ದೇಶದಿಂದ ಕಳುಹಿಸಿದ್ದಾಗಿ ತಿಳಿದುಬಂದಿದೆ. ಜೊತೆಗೆ, ಜಾನುವಾರು ಸಾಗಾಟಕ್ಕೆ ಬೇರೆಯವರ ಹೆಸರಿನಲ್ಲಿ ದಾಖಲೆಗಳನ್ನು ಪಡೆದು ಸಾಗಿಸುತ್ತಿರುವುದೂ ಬೆಳಕಿಗೆ ಬಂದಿದೆ.

Leave a Reply

Your email address will not be published. Required fields are marked *