Breaking
28 Feb 2026, Sat

ನಿಶ್ಚಿತಾರ್ಥ ಮಾಡಿಕೊಂಡ ಭಾರ್ಗವಿ ಎಲ್ಎಲ್ ಬಿ ಖ್ಯಾತಿಯ ರಾಧಾ ಭಗವತಿ ಮತ್ತು ಅಮೃತಧಾರೆ ಸೀರಿಯಲ್ ನ ಜೆಡಿ ಖ್ಯಾತಿಯ ಜಯದೇವ್ ಪಾತ್ರಧಾರಿ ನಟ ರಾಣವ್ ಗೌಡ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಾ ಇರುವ ಭಾರ್ಗವಿ ಎಲ್ಎಲ್ ಬಿ ಖ್ಯಾತಿಯ ರಾಧಾ ಭಗವತಿ ಮತ್ತು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಾ ಇರುವ ಅಮೃತಧಾರೆ ಸೀರಿಯಲ್ ನ ಜೆಡಿ ಖ್ಯಾತಿಯ ಜಯದೇವ್ ಪಾತ್ರಧಾರಿ ನಟ ರಾಣವ್ ಗೌಡ ಅವರು ಇದೀಗ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ.

ನಟ ರಾಣವ್ ಗೌಡ – ರಾಧಾ ಭಗವತಿ ಅವರ ನಿಶ್ಚಿತಾರ್ಥ ನೆರವೇರಿದೆ. ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ಇಬ್ಬರೂ ಉಂಗುರ ಬದಲಿಸಿಕೊಂಡಿದ್ದಾರೆ. ತಮ್ಮ ನಿಶ್ಚಿತಾರ್ಥದ ಫೋಟೋವನ್ನು ಹಂಚಿಕೊಂಡು ರಾಣವ್ ಗೌಡ ಫೈನಲಿ ಎಂದು ಬರೆದುಕೊಂಡಿದ್ದಾರೆ.

ಹೌದು ಆರಂಭದಲ್ಲಿ ರಾಧಾ ಭಗವತಿ ಅವರು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ ಅಮೃತಧಾರೆ ಸೀರಿಯಲ್ ನಲ್ಲಿ ಮಲ್ಲಿ ಅನ್ನುವ ಪಾತ್ರದ ಮೂಲಕ ರಾನವ್ ಗೌಡ ಅವರ ಜೊತೆ ಅವರ ಪತ್ನಿಯ ಪಾತ್ರದಲ್ಲಿ ತೆರೆ ಹಂಚಿಕೊಂಡಿದ್ದರು. ಈ ವೇಳೆ ಇಬ್ಬರ ನಡುವೆ ಪ್ರೀತಿ ಚಿಗುರಿದ್ದು ನಿಶ್ಚಿತಾರ್ಥದ ಮೂಲಕ ಅಧಿಕೃತ ಮುದ್ರೆ ಬಿದ್ದಿದೆ.

ಇತ್ತ ನಿಜ ಜೀವನದಲ್ಲೂ ಈ ಜೋಡಿ ಒಂದಾಗಲಿದ್ದು ಎಂಗೇಜ್ಮೆಂಟ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

ರಾಣವ್ ಗೌಡ – ಭಾರ್ಗವಿ ಎಲ್ಎಲ್ ಬಿ ಮದುವೆ ದಿನಾಂಕದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

Leave a Reply

Your email address will not be published. Required fields are marked *