ಟಾಲಿವುಡ್ ನಟ ವಿಜಯ್ ದೇವರಕೊಂಡ ಮತ್ತು ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ ವಿವಾಹ ಇದೇ ಬರುವ ಫೆ.26 ರಂದು ನಡೆಯಲಿದ್ದು ಇವರ ವೆಡ್ಡಿಂಗ್ ಕಾರ್ಡ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಕಳೆದ ಅಕ್ಟೋಬರ್ ನಲ್ಲಿ ಇವರಿಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಫೆ.26 ರಂದು ರಾಜಸ್ತಾನದ ಉದಯಪುರ ಪ್ಯಾಲೆಸ್ ನಲ್ಲಿ ಮದ್ವೆ ನಡೆಯುತ್ತಿದೆ ಅಂತ ಹೇಳಲಾಗ್ತ ಇದ್ರೂ, ಮದುವೆಯ ಸ್ಥಳ ಕುರಿತು ಮಾಹಿತಿ ಬಹಿರಂಗಪಡಿಸಿಲ್ಲ. ಮಾರ್ಚ್ 4 ರಂದು ಬಂಜಾರ ಹಿಲ್ಸ್ ನ ತಾಜ್ ಕೃಷ್ಣಾ ಪ್ಯಾಲೆಸ್ ನಲ್ಲಿ ಅದ್ಧೂರಿ ಆರತಕ್ಷತೆ ನಡೆಯಲಿದೆ ಎಂಬ ವಿಚಾರ ವಿವಾಹ ಪತ್ರಿಕೆಯಲ್ಲಿದೆ.

ಹಲವು ವರ್ಷಗಳಿಂದಲೂ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣರ ಮದುವೆಯ ಬಗ್ಗೆ ಗಾಸಿಪ್ ಗಳು ಸದ್ದು ಮಾಡುತ್ತಿದ್ದವು. ಇಬ್ಬರು ಒಟ್ಟಿಗೆ ಸುತ್ತಾಡುತ್ತಿದ್ದರೂ ಒಬ್ಬರಿಗೊಬ್ಬರು ಗುಟ್ಟುಬಿಟ್ಟುಕೊಟ್ಟಿರಲಿಲ್ಲ.

ಆತ್ಮೀಯ ಸ್ನೇಹಿತರು ಹಾಗೂ ಕುಟುಂಬದ ಗುರು ಹಿರಿಯರ ಸಮ್ಮುಖದಲ್ಲಿ ವಿಜಯ್ ಮತ್ತು ರಶ್ಮಿಕಾ ವಿವಾಹವಾಗಲಿದ್ದು, ಈ ರೀತಿ ಆಹ್ವಾನ ನೀಡಿದವರ ಪೈಕಿ ಒಬ್ಬರು ಮದುವೆ ಆಮಂತ್ರಣ ಪತ್ರಿಕೆಯನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.






