Breaking
21 Jun 2026, Sun

ಟ್ರೇಡ್ ಗ್ರೀನ್ ಹೆಸರಿನಲ್ಲಿ ಲಾಭ ನೀಡುವುದಾಗಿ ನಂಬಿಸಿ 27,14,000 ರೂ ವಂಚನೆ

ಕುಂಬಳೆ: ಆನ್ ಲೈನ್ ಟ್ರೇಡಿಂಗ್ ನಲ್ಲಿ ಹೆಚ್ಚಿನ ಲಾಭ ನೀಡುವುದಾಗಿ ನಂಬಿಸಿ 27,14,000 ರೂ. ಪಡೆದು ವಂಚಿಸಿದ ಘಟನೆ ನಡೆದಿದೆ.

ವಂಚನೆಗೊಳಗಾದ ವ್ಯಕ್ತಿಯನ್ನು ಕುಂಬಳೆನಾಯ್ಕಾಪು ಅನಂತಪುರ ದೇವಸ್ಥಾನದ ಸಮೀಪದ ನಿವಾಸಿ ಎಂದು ಗುರುತಿಸಲಾಗಿದೆ.

ಟ್ರೇಡ್ ಗ್ರೀನ್ ಎಂಬ ಟ್ರೇಡಿಂಗ್ ಕಂಪೆನಿ ಹೆಸರಿನಲ್ಲಿ ಆರೋಪಿಗಳು ಹಲವಾರು ಜನರನ್ನು ವಂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಇದಲ್ಲದೆ ವಂಚನೆಗೆ ಒಳಗಾದವರ ಬ್ಯಾಂಕ್ ಖಾತೆಯಿಂದ ಹಣವನ್ನು ಪಡೆದು ವಂಚಿಸಿದ್ದಾರೆ ಎನ್ನಲಾಗಿದೆ.

ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

Leave a Reply

Your email address will not be published. Required fields are marked *