ಬೆಳ್ತಂಗಡಿ: ಬೈಕೊಂದು ಡಿವೈಡರ್ ಗೆ ಡಿಕ್ಕಿ ಹೊಡೆದ ಘಟನೆ ರಾಷ್ಟ್ರೀಯ ಹೆದ್ದಾರಿ ಲಾಯಿಲ ಪ್ರಸನ್ನ ಕಾಲೇಜು ಬಳಿ ಇಂದು (ಫೆ. 21) ನಡೆದಿದೆ.

ಉಜಿರೆಯಿಂದ ಬೆಳ್ತಂಗಡಿ ಕಡೆ ಬರುತ್ತಿದ್ದ ಬೈಕ್ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ಬೈಕ್ ಸವಾನಿಗೆ ಗಂಭೀರ ಗಾಯಗವಾಗಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.








