Breaking
27 Apr 2026, Mon

ಪೆರ್ಡೂರಿನಲ್ಲಿ ಕರು ಕಳವು ಯತ್ನ: ಇಬ್ಬರು ಆರೋಪಿಗಳು ಬಂಧನ

ಉಡುಪಿ: ಪೆರ್ಡೂರು ದೇವಸ್ಥಾನದ ಮುಂಭಾಗದಲ್ಲಿರುವ ಹೊಲದಿಂದ ಕರುವನ್ನು ಕದ್ದು ಮಾರಾಟ ಮಾಡಲು ಯತ್ನಿಸಿದ ಇಬ್ಬರು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಪೆರ್ಡೂರು ಗ್ರಾಮದ ಪಾಡಿಗಾರದ ಮಾತೃಶ್ರೀ ನಿಲಯದ ನಿವಾಸಿ ರಾಘವೇಂದ್ರ (36) ಮತ್ತು ಪೆರ್ಡೂರು ಗ್ರಾಮದ ನೀಲಶ್ರೀ ನಿವಾಸಿ ಸುಧೀಂದ್ರ ಶೆಟ್ಟಿ (36) ಎಂದು ಗುರುತಿಸಲಾಗಿದೆ.

ಪೆರ್ಡೂರು ದೇವಸ್ಥಾನದ ಮುಂಭಾಗದಲ್ಲಿರುವ ಹೊಲದಿಂದ ಕರುವನ್ನು ಕದ್ದ ಆರೋಪಿಗಳು ಅದನ್ನು ಆಟೋರಿಕ್ಷಾದ ಮೂಲಕ ಸಾಗಿಸಲು ಯತ್ನಿಸಿದರೆಂದು ತಿಳಿದುಬಂದಿದೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿ, ಬಳಸಿದ ಆಟೋರಿಕ್ಷಾವನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅವರಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

Leave a Reply

Your email address will not be published. Required fields are marked *