ಬಂಟ್ವಾಳ: ತಾಲೂಕಿನ ವೀರಕಂಭ ಗ್ರಾಮದ ಗಣೇಶ್ ಕೋಡಿ ನಿವಾಸಿ ರಾಜೇಶ್ವರಿ ಅವರ ಮನೆಯು ಇತ್ತೀಚೆಗೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದು ಹಾನಿ ಸಂಭವಿಸಿದ್ದು, ಮನೆಯನ್ನು ದುರಸ್ತಿಗೊಳಿಸುವ ನಿಮಿತ್ತ ಮೇಲ್ಚಾವಣಿ ತೆರವು ಗೊಳಿಸುವ ಕಾರ್ಯವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಲ್ಲಡ್ಕ ವಲಯ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಶ್ರಮದಾನ ಸೇವೆ ಮಾಡುವ ಮೂಲಕ ತೆರವು ಮಾಡಿಕೊಟ್ಟರು.

ಈ ಕಾರ್ಯದಲ್ಲಿ ಕಲ್ಲಡ್ಕ ವಲಯ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಅಧ್ಯಕ್ಷ ಮಾಧವ ಸಾಲಿಯನ್ ಕುದ್ರೆಬೆಟ್ಟು, ಘಟಕ ಸಂಯೋಜಕಿ ವಿದ್ಯಾ, ಸದಸ್ಯರುಗಳಾದ ಸತೀಶ್ ಕುದ್ರೆಬೆಟ್ಟು, ಧನಂಜಯ ಬೊಂಡಲ, ಚಿನ್ನಾ ಕಲ್ಲಡ್ಕ, ತುಳಸಿ ಕೊಳಕೀರು, ಸೌಮ್ಯ ಬೊಂಡಲ, ಮಧುರಾಜ್ ಗಣೇಶ್ ಕೋಡಿ, ಒಕ್ಕೂಟ ಸೇವಾ ಪ್ರತಿನಿಧಿ ವಿಜಯ ಮೊದಲಾದವರು ಭಾಗವಹಿಸಿದ್ದರು.

ವೀರಕಂಬ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ದಿನೇಶ್ ಪೂಜಾರಿ, ಕಲ್ಲಡ್ಕ ವಲಯ ಮೇಲ್ವಿಚಾರಕ ಸುಖ ರಾಜ್ ಭೇಟಿ ನೀಡಿ ಪ್ರೋತ್ಸಾಹಿಸಿದರು.







