ವಿಟ್ಲ: ವಿಟ್ಲ ಸರಕಾರಿ ಪ್ರೌಢಶಾಲಾ(ಆರ್ ಎಂ ಎಸ್ ಎ) ವಾರ್ಷಿಕ ಕ್ರೀಡಾಕೂಟ ಮಂಗಳವಾರ ನಡೆಯಿತು.ಮಂಚಿ ಕುಕ್ಕಾಜೆ ಸರಕಾರಿ ಶಾಲೆಯ ದೈಹಿಕ ಶಿಕ್ಷಕಿ ವಿನೋದ ಕ್ರೀಡಾ ಜ್ಯೋತಿ ಸ್ವೀಕರಿಸಿ, ಮಾತನಾಡಿ ಶಿಕ್ಷಣಕ್ಕೆ ಕ್ರೀಡೆ ಸ್ಫೂರ್ತಿ. ಪ್ರಸಕ್ತ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಕ್ರೀಡಾ ಕ್ಷೇತ್ರದಲ್ಲಿ ಮುನ್ನಡೆಯುವ ವಿಫುಲ ಅವಕಾಶವಿದೆ. ಕ್ರೀಡಾ ಸ್ಫೂರ್ತಿ, ಆಸಕ್ತಿ ಹಾಗೂ ಇಚ್ಛಾಶಕ್ತಿಯಿಂದ ಪರಿಶ್ರಮ ಪಟ್ಟು ಆಡಿದಾಗ ತಕ್ಕ ಪ್ರತಿಫಲ ಸಿಗುತ್ತದೆ ಎಂದು ತಿಳಿಸಿದರು.
ಹಿರಿಯ ಕ್ರೀಡಾಪಟು ತುಳಸಿದಾಸ ಶೆಣೈ ವಿಟ್ಲ ಪಥ ಸಂಚಲನ ಗೌರವ ವಂದನೆ ಸ್ವೀಕರಿಸಿದರು.ವಿಟ್ಲ ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ರವಿಪ್ರಕಾಶ್ ಧ್ವಜಾರೋಹಣ ನೆರವೇರಿಸಿದರು.ಎಸ್ ಡಿಎಂಸಿ ಅಧ್ಯಕ್ಷರಾದ ರವಿಶಂಕರ ಶಾಸ್ತ್ರಿ, ರಶ್ಮಿ ಸಮಾರಂಭ ಉದ್ಘಾಟಿಸಿದರು. ಪ್ರೌಢಶಾಲಾ ಮುಖ್ಯ ಶಿಕ್ಷಕಿ ಫೆಲ್ಸಿಟಾ ಈವಾ ಗಲ್ಬಾವೊ ಅಧ್ಯಕ್ಷತೆ ವಹಿಸಿದ್ದರು . ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಭಾಗವಹಿಸಿದ್ದರು.ಸಹ ಶಿಕ್ಷಕಿ ಪ್ರೇಮಲತಾ, ಎಸ್ಡಿಎಂಸಿ ಸದಸ್ಯರಾದ ರಾಜಶೇಖರ್, ಪ್ರವೀಣ್, ವಿಶಾಲಾಕ್ಷಿ, ವಿಶಾಲಾಕ್ಷಿ ಅಮೀನ್ ಉಪಸ್ಥಿತರಿದ್ದರು.
ದೈಹಿಕ ಶಿಕ್ಷಕ ರಾಜೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.ವಿದ್ಯಾರ್ಥಿ ನಾಯಕ ಶಿಶಿರ್ ಸ್ವಾಗತಿಸಿದರು. ವಿದ್ಯಾರ್ಥಿನಿ ಚೈತನ್ಯ ವರದಿ ವಾಚಿಸಿದರು. ಚಿಂತನ ವಂದಿಸಿದರು. ಸಹ ಶಿಕ್ಷಕ ಜಗದೀಶ್ ಶೆಟ್ಟಿ, ವಿದ್ಯಾರ್ಥಿನಿ ಮನಸ್ವಿ ಕಾರ್ಯಕ್ರಮ ನಿರೂಪಿಸಿದರು. ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕರಾದ ವಿದ್ಯಾಶಂಕರ್, ಶ್ವೇತಾ ಸಹಕರಿಸಿದರು.