ಬಂಟ್ವಾಳ : ಹೊಕ್ಕಾಡಿಗೋಳಿ ಶಾಲೆಯಲ್ಲಿ ಮಕ್ಕಳ ಮೆಟ್ರಿಕ್ ಮೇಳ ಸಮಾರಂಭವು ಫೆ.14 ರಂದು ನಡೆಯಿತು.
ಶ್ರೀ ಕೃಷ್ಣ ಕ್ರಷರ್ ನ ಉದ್ಯಮಿಗಳಾದ ರಕ್ಷಣ್ ಮೆಲಾಂಟ ಅವರು ಮೆಟ್ರಿಕ್ ಮೇಳವನ್ನು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಆರಂಬೋಡಿ ಪಂಚಾಯತ್ ಪಿಡಿಓ ಗಣೇಶ್ ಶೆಟ್ಟಿ ಅವರು, ಮೆಟ್ರಿಕ್ ಮೇಳವು ವಿದ್ಯಾರ್ಥಿಗಳಲ್ಲಿ ಸೃಜನಶೀಲತೆಯನ್ನು ಉತ್ತೇಜಿಸುವುದರ ಜೊತೆಗೆ ವ್ಯವಹಾರ ಜ್ಞಾನವನ್ನು ಮೂಡಿಸುವ ಅದ್ಭುತ ಚಟುವಟಿಕೆಯಾಗಿದೆ. ಈ ಮೇಳದ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸವು ಬೆಳೆಯುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಎಸ್ ಡಿ ಎಂ ಸಿ ಅಧ್ಯಕ್ಷರಾದ ದಿನೇಶ್ ಹುಲಿಮೇರು ಇವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಾಘವೇಂದ್ರ ಭಟ್, ಶಶಿಧರ್ ಕಲ್ಲಾಪು ಹಾಗೂ ಕಿರಣ್ ಮಂಜಿಲ ಇವರು ಉಪಸ್ಥಿತರಿದ್ದು ಶುಭ ಹಾರೈಸಿದರು.

ಎಸ್ ಡಿ ಎಂ ಸಿ ಸದಸ್ಯರು, ತಾಯಂದಿರ ಸಮಿತಿ ಸದಸ್ಯರು, ಹಳೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಊರಿನವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ವ್ಯಾಪಾರ ಮಾಡಿ ಪ್ರೋತ್ಸಾಹಿಸಿದರು.
ಶಾಲಾ ಮುಖ್ಯೋಪಾಧ್ಯಾಯರಾದ ಸುಮಿತ್ರ ಎಸ್. ಇವರು ಸ್ವಾಗತಿಸಿ, ಶಿಕ್ಷಕಿಯರಾದ ಸುಚಿತ್ರ, ಮೆಟಿಲ್ಡ ಡಿಸೋಜ, ಸಿಲ್ವಿಯಾ ಮಿರಾಂದ, ಶುಭವತಿ, ಸುತೀಕ್ಷಾ ಹಾಗೂ ಪ್ರಮೀಕ್ಷಾ ಇವರು ಸಹಕರಿಸಿದರು.




