ಧಾರವಾಡ: ಕೊರಿಯನ್ ಗೇಮ್ ಗೆ ಯುವಕನೊಬ್ಬ ಬಲಿಯಾದ ಘಟನೆ ಧಾರವಾಡ ನಗರದ ಮಂಗಳಗಟ್ಟಿ ಪ್ಲಾಟ್ ನಲ್ಲಿ ಫೆ.6 ರಂದು ನಡೆದಿದೆ.
ಆತ್ಮಹತ್ಯೆಗೆ ಶರಣಾದ ಯುವಕನನ್ನು ವಿಕಾಸ್ (20) ಎಂದು ಗುರುತಿಸಲಾಗಿದೆ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಎಂದು ದೂರು ದಾಖಲಾಗಿತ್ತು.

ವಿಕಾಸ್ ಸಾವಿನ ನಂತರ ಮೊಬೈಲ್‌ನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು , ಪರಿಶೀಲನೆಯ ವೇಳೆ ಕೊರಿಯನ್ ಗೇಮ್ಸ್ ಪತ್ತೆಯಾಗಿದೆ. ಈತ ಕೊರಿಯನ್ ಗೇಮ್ಸ್ ಗೆ ವಿಕಾಸ್ ಅಡಿಕ್ಟ್ ಆಗಿದ್ದ ಎಂಬ ವಿಚಾರ ತನಿಖೆ ವೇಳೆ ತಿಳಿದು ಬಂದಿದೆ.
ಪಿಯುಸಿ ಸೈನ್ಸ್ ಮುಗಿಸಿ ಮನೆಯಲ್ಲೇ ಇದ್ದ ವಿಕಾಸ್ ಯಾರಿಗೂ ಗೊತ್ತಿಲ್ಲದೇ ಗೇಮ್ಸ್ ಆಡುತ್ತಿದ್ದ. ಸಾವಿಗೂ ಮುನ್ನ, ನನ್ನ ಸಾವಿಗೆ ನಾನೇ ಕಾರಣ ಎಂದು ಸೆಲ್ಫ್ ಮೆಸೇಜ್ ಮಾಡಿ ಸಾವಿಗೀಡಾಗಿದ್ದ.







