Breaking
6 Aug 2026, Thu

ಮಲ್ಪೆಯ ಸಾರ್ವಜನಿಕ ಸ್ಥಳದಲ್ಲಿ ಜೂಜಾಟವಾಡುತ್ತಿದ್ದ ಅಡ್ಡೆಗೆ ಪೊಲೀಸರ ದಾಳಿ, ಐವರು ಅರೆಸ್ಟ್

ಉಡುಪಿ: ಸಾರ್ವಜನಿಕ ಸ್ಥಳದಲ್ಲಿ ಅಂದರ್-ಬಾಹರ್ ಇಸ್ಪೀಟ್ ಜೂಜಾಟ ನಡೆಸುತ್ತಿದ್ದ ಅಡ್ಡೆಯ ಮೇಲೆ ದಾಳಿ ನಡೆಸಿದ ಮಲ್ಪೆ ಠಾಣೆಯ ಪೊಲೀಸರು ಐವರನ್ನು ಬಂಧಿಸಿದ್ದಾರೆ.

ಬಂಧಿತರನ್ನು ನಿತಿನ್ ರಾಜ್ (35), ಸಚಿನ್ ಆರ್ ಶೆಟ್ಟಿ (35), ಸತೀಶ್ @ ಕಿಶೋರ್ (38), ರಂಜಿತ್ ಕೆ ಅಮೀನ್ (39) ಹಾಗೂ ರವಿ (36) ಎಂದು ಗುರುತಿಸಲಾಗಿದೆ.

ಬಂಧಿತರಿಂದ ಜೂಜಾಟ ಬಳಸಲಾಗುತ್ತಿದ್ದ 52 ಇಸ್ಪೀಟ್ ಎಲೆಗಳು, ರೂ. 4,90,920 ನಗದು, ನಾಲ್ಕು ಮೊಬೈಲ್ ಫೋನ್ ಗಳು, ಒಂದು ಪವರ್ ಬ್ಯಾಂಕ್, ಜೊತೆಗೆ ಟೊಯೋಟಾ ಫಾರ್ಚುನರ್ ಕಾರು ಮತ್ತು ಮಾರುತಿ ಸುಜುಕಿ ಸ್ವಿಫ್ಟ್ ಕಾರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *