Breaking
12 Feb 2026, Thu

ಕುಕ್ಕಿಪಾಡಿ ಗ್ರಾ.ಪಂ.ಆಡಳಿತ ಸಮಿತಿಯ ಸಭೆ: ಸೇವಾ ಕಾರ್ಯಕರ್ತರಿಗೆ ಸನ್ಮಾನ

ಬಂಟ್ವಾಳ: ಕುಕ್ಕಿಪಾಡಿ ಗ್ರಾಮ ಪಂಚಾಯತ್ ನಲ್ಲಿ ಚುನಾಯಿತ ಆಡಳಿತ ಸಮಿತಿಯ ಅವಧಿ ಮುಕ್ತಾಯವಾಗುತ್ತಿರುವ ಹಿನ್ನಲೆ ಕೊನೆಯ ಆಡಳಿತ ಸಮಿತಿ ಸಭೆಯು ನಡೆಯಿತು.

ಈ ಸಭೆಯಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಅಂಗನವಾಡಿ ಕಾರ್ಯಕರ್ತರು, ಆಶಾ ಕಾರ್ಯಕರ್ತರು, ಸಂಜೀವಿನಿ ಸೇವಕರು, ಅರೋಗ್ಯ ಇಲಾಖೆಯ ದಾದಿಯರು, ಸಮುದಾಯ ಹೆಲ್ತ್ ಅಧಿಕಾರಿ ಹಾಗೂ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ ಹಾಗೂ ಸಿಬ್ಬಂದಿಗಳನ್ನು ಶಾಲು ಹಾಕಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷ ಶೇಖರ್ ಶೆಟ್ಟಿ ಬದ್ಯಾರು, ಉಪಾಧ್ಯಕ್ಷೆ ಬೇಬಿ ಪೂಜಾರಿ ದೇವಸ, ಸದಸ್ಯರಾದ ಲಿಂಗಪ್ಪ ಪೂಜಾರಿ ಹಲಯಿ, ಯೋಗೀಶ್ ಆಚಾರ್ಯ, ದಿನೇಶ್ ಸುಂದರ ಶಾಂತಿ, ಚಂದ್ರ ಪೂಜಾರಿ, ಸುಜಾತಾ ಪೂಜಾರಿ, ಪ್ರತಿಭಾ ಶೆಟ್ಟಿ, ಶೋಭಾ ಕುಲಾಲ್, ಗೀತಾ ನಾಯ್ಕ್, ಪೂರ್ಣಿಮಾ ರವಿರಾಜ್, ಪುಷ್ಪ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪದ್ಮಾ ನಾಯ್ಕ್, ಕಾರ್ಯದರ್ಶಿ ಪ್ರೇಮಾ ನಾಯ್ಕ್, ಸಿದ್ದಕಟ್ಟೆ ಸಿ. ಎ. ಬ್ಯಾಂಕ್ ಅಧ್ಯಕ್ಷ ಪ್ರಭಾಕರ ಪ್ರಭು, ನಿರ್ದೇಶಕ ರಾಜೇಶ್ ಶೆಟ್ಟಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *