Breaking
25 Sep 2026, Fri

ಕಲ್ಲಡ್ಕದ ವೀರಕಂಭದಲ್ಲಿ ಹಂಚಿನ ಮನೆಗೆ ಬೆಂಕಿ: ಲಕ್ಷಾಂತರ ರೂ. ನಷ್ಟ

ಬಂಟ್ವಾಳ: ಕಲ್ಲಡ್ಕ ವೀರಕಂಭ ಗ್ರಾಮದ ಗಣೇಶ್ ಕೋಡಿಯಲ್ಲಿರುವ ಹಂಚಿನ ಮನೆಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ರೂ. ನಷ್ಟ ಸಂಭವಿಸಿದ ಘಟನೆ ನಡೆದಿದೆ.

ರಾಜೇಶ್ವರಿ ಎಂಬವರಿಗೆ ಸೇರಿದ ಮನೆಗೆ ಬೆಳಗ್ಗೆ ಸುಮಾರು 11 ಗಂಟೆ ವೇಳೆಗೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ನೆರೆಮನೆಯವರು ಹೊಗೆ ಬರುವುದನ್ನು ನೋಡಿದಾಗ ಮನೆಗೆ ಬೆಂಕಿ ಆವರಿಸಿಕೊಂಡಿತ್ತು. ತಕ್ಷಣವೇ ಸ್ಥಳೀಯರು ಬೆಂಕಿಯನ್ನು ಆರಿಸಲು ಹರಸಾಹಸ ಪಟಿದ್ದಾರೆ.

ಘಟನೆಯಲ್ಲಿ ಮನೆಯೊಳಗಿದ್ದ ಬೆಲೆಬಾಳುವ ಸೊತ್ತುಗಳು, ಮನೆಯ ಸಂಬಂಧಿಸಿದ ಅಗತ್ಯ ದಾಖಲೆಗಳು ,ಎಲೆಕ್ಟ್ರಾನಿಕ್ ವಸ್ತುಗಳು ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ.

ಘಟನೆಯ ವೇಳೆ ರಾಜೇಶ್ವರಿ ಹಾಗೂ ಅವರಿಗೆ ಇಬ್ಬರು ಗಂಡು ಮಕ್ಕಳು ಶಾಲೆಗೆ ಹೋಗಿದ್ದು, ರಾಜೇಶ್ವರಿ ಅವರು ಕಲ್ಲಡ್ಕಕ್ಕೆ ಕೆಲಸಕ್ಕೆ ತೆರಳಿದ್ದರು ಎಂದು ತಿಳಿದುಬಂದಿದೆ.

ಘಟನಾ ಸ್ಥಳಕ್ಕೆ ಬಂಟ್ವಾಳ ಕಂದಾಯ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *