ಕುಂಬಳೆ: ಕಾರು ಮತ್ತು ಸ್ಕೂಟರ್ ಮಧ್ಯೆ ಭೀಕರ ಅಪಘಾತ ಸಂಭವಿಸಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿಯ 66ರ ಕುಂಬಳೆ-ಆರಿಕ್ಕಾಡಿಯಲ್ಲಿ ನಡೆದಿದೆ.
ಸ್ಕೂಟರ್ ಸವಾರ ಮುನೀರ್(40) ಎಂಬವರು ಸ್ಥಳದಲ್ಲೇ ಮೃತಪಟ್ಟ ದುರ್ದೈವಿಯಾಗಿದ್ದಾರೆ.

ಮೂಲತಃ ಕೇರಳದ ಪಚ್ಚಂಬಳ ನಿವಾಸಿಯಾಗಿರುವ ಮುನೀರ್ ಅವರು ಕನ್ಯಾನ ಪೇಟೆಯಲ್ಲಿರುವ ಹೋಟೆಲ್ ವೊಂದರಲ್ಲಿ ಕಾರ್ಮಿಕರಾಗಿದ್ದು ಅದೇ ಪರಿಸರದ ಯುವತಿಯನ್ನು ವಿವಾಹವಾಗಿದ್ದು ಬಳಿಕ ಇಲ್ಲೇ ವಾಸವಾಗಿದ್ದರು.

ಅವರು ನಿನ್ನೆ ಸಂಜೆಯ ವೇಳೆ ಮಾಲಿಕನ ಸ್ಕೂಟರ್ ಪಡೆದು ಕುಂಬಳೆ ಕಡೆ ಹೋಗಿದ್ದಾಗ ಈ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.







