Breaking
9 Feb 2026, Mon

ದೆಹಲಿಯಲ್ಲಿ ಸಿನಿಮಾ ಮಾದರಿಯ ಎನ್‌ಕೌಂಟರ್‌ನಲ್ಲಿ ಕುಖ್ಯಾತ ಕ್ರಿಮಿನಲ್ ಗಳನ್ನು ಬಂಧಿಸಿದ ಪೊಲೀಸರು

ನವದೆಹಲಿ: ಸಿನಿಮಾ ಮಾದರಿಯ ಎನ್‌ಕೌಂಟರ್‌ನಲ್ಲಿ ಇಬ್ಬರು ಕುಖ್ಯಾತ ಕ್ರಿಮಿನಲ್ ಗಳನ್ನು ಪೊಲೀಸರ ತಂಡ ಸೆರೆಹಿಡಿದಿರುವ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯ ಆರ್ಕೆ ಪುರಂ ಪ್ರದೇಶದಲ್ಲಿ ಇಂದು ಬೆಳ್ಳಂ ಬೆಳಗ್ಗೆ ನಡೆದಿದೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಸಂಜಯ್ ಅಲಿಯಾಸ್ ‘ದರಿಂದಾ’ ಮತ್ತು ಆತನ ಸಹಚರ ಸೋನು ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ನೈಋತ್ಯ ದೆಹಲಿಯ ಆರ್ಕೆ ಪುರಂ ಸೆಕ್ಟರ್-3ರಲ್ಲಿ ಈ ಇಬ್ಬರು ಪಾತಕಿಗಳು ದೊಡ್ಡ ಅಪರಾಧ ಕೃತ್ಯ ಎಸಗಲು ಸಂಚು ರೂಪಿಸಿದ್ದಾರೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಈ ವೇಳೆ ಬೈಕ್ನಲ್ಲಿ ಬಂದ ಆರೋಪಿಗಳನ್ನು ಪೊಲೀಸರು ತಡೆಯಲು ಯತ್ನಿಸಿದಾಗ, ಆರೋಪಿಗಳು ಪೊಲೀಸರತ್ತ ಗುಂಡಿನ ಮಳೆಗರೆದಿದ್ದಾರೆ.

ಈ ಘಟನೆಗೆ ಸಂಬಂಧಪಟ್ಟಂತೆ ಪೊಲೀಸರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು ಬಂಧಿತ ಸಂಜಯ್ ಸಾಮಾನ್ಯ ಪಾತಕಿಯಲ್ಲ. ಈತನ ಮೇಲೆ ಈಗಾಗಲೇ ದೆಹಲಿಯ ವಿವಿಧ ಠಾಣೆಗಳಲ್ಲಿ ಸುಮಾರು 80ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಲೂಟಿ, ಹಲ್ಲೆ ಮತ್ತು ದರೋಡೆಯಂತಹ ಗಂಭೀರ ಕೃತ್ಯಗಳಲ್ಲಿ ಈತ ‘ಮೋಸ್ಟ್ ವಾಂಟೆಡ್’ ಆಗಿದ್ದ ಎಂದು ಮಾಹಿತಿ ನೀಡಿದ್ದಾರೆ.

ಘಟನಾ ಸ್ಥಳದಿಂದ ಕೃತ್ಯಕ್ಕೆ ಬಳಸಲು ತರಲಾಗುತ್ತಿದ್ದ ಪಿಸ್ತೂಲ್ ಮತ್ತು ಸಜೀವ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಗಾಯಾಳು ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.

Leave a Reply

Your email address will not be published. Required fields are marked *