Breaking
9 Feb 2026, Mon

ಉಪ್ಪಿನಂಗಡಿಯ ಯುವತಿ ನಾಪತ್ತೆ

ಉಪ್ಪಿನಂಗಡಿ: ಯುವತಿಯೋರ್ವರು ನಾಪತ್ತೆಯಾದ ಘಟನೆ ಫೆ. 3ರಂದು  ನಡೆದಿದೆ.

ನಾಪತ್ತೆಯಾದ ಯುವತಿಯನ್ನು ಉರುವಾಲು ಗ್ರಾಮದ ಮಜಿಕುಡೇಲು  ನಿವಾಸಿ ದಿ. ಶೀನಪ್ಪ ಎಂಬವರ ಪುತ್ರಿ, ಸುಪ್ರೀತಾ (20) ಎಂದು ತಿಳಿದು ಬಂದಿದೆ.

ಫೆ. 2 ರಂದು ಕೋಣೆಯಲ್ಲಿ ಮಲಗಿದ್ದ ಸುಪ್ರೀತಾ ನಸುಕಿನ ಜಾವ ಕಾಣೆಯಾಗಿದ್ದು ದೂರವಾಣಿ ಕರೆಗಳನ್ನು ಸ್ವೀಕರಿಸದೇ  ಬಳಿಕ ಅವರ ಮೊಬೈಲ್ ಸ್ವಿಚ್ ಆಫ್ ಆಗಿರುವುದು ತಿಳಿದುಬಂದಿದೆ.

ಈ  ಕುರಿತು  ಗಾಬರಿಗೊಂಡ ತಾಯಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *