Breaking
3 Feb 2026, Tue

ಶ್ರೀ ಮಹಾಕಾಳಿ ದೇವಸ್ಥಾನದಲ್ಲಿ ವಾರ್ಷಿಕ ಮಹೋತ್ಸವದ ಮಹಾ ರಥೋತ್ಸವ

ಬಂಟ್ವಾಳ: ತಾಲೂಕಿನ ಅರಳ ಶ್ರೀ ಗರುಡ ಮಹಾಕಾಳಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ ಪ್ರಯುಕ್ತ ಮಹಾ ರಥೋತ್ಸವವು ಜ. 30 ರಂದು ರಾತ್ರಿ ನಡೆಯಿತು.

ಕ್ಷೇತ್ರದ ತಂತ್ರಿ ಉದಯ ಪಾಂಗಣ್ಣಾಯ ಮಾರ್ಗದರ್ಶನದಲ್ಲಿ ಪ್ರಧಾನ ಅರ್ಚಕ ರಾಜಾ ಭಟ್, ಹರೀಶ ಭಟ್, ದಿನೇಶ ಭಟ್ ಸೇರಿದಂತೆ ಅನೇಕರು ವಿವಿಧ ಪೂಜಾ ವಿಧಿ ವಿಧಾನ ನೆರವೇರಿಸಿದರು.

ಈ ವೇಳೆ ಭಜನೆ, ದೇವರ ಬಲಿ ಉತ್ಸವ ಮತ್ತು ಸಾರ್ವಜನಿಕ ಅನ್ನಸಂತರ್ಪಣೆಯಲ್ಲಿ ಅಪಾರ ಮಂದಿ ಭಕ್ತರು ಪಾಲ್ಗೊಂಡಿದ್ದರು.

ಈ ಸಂದರ್ಭದಲ್ಲಿ ದೇವಳದ ಆಡಳಿತ ಸಮಿತಿ ಅಧ್ಯಕ್ಷ ಎ.ರಾಜೇಂದ್ರ ಶೆಟ್ಟಿ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯ ಬಡಾಜೆ ರವಿಶಂಕರ ಶೆಟ್ಟಿ, ಪ್ರಮುಖರಾದ ಜಗದೀಶ ಆಳ್ವ ಅಗ್ಗೊಂಡೆ, ಮುರಳೀಧರ ಶೆಟ್ಟಿ ಸಂಗಬೆಟ್ಟು, ಹರಿಶ್ಚಂದ್ರ ಪಕ್ಕಳ, ಡೊಂಬಯ ಅರಳ, ರವಿ ಅರಸ, ಬಾಬು ಶೇಖ, ಉಮೇಶ ಡಿ.ಎಂ. ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *