Breaking
29 Jun 2026, Mon

ಬಸ್‌ನಲ್ಲಿ ಕುಸಿದು ಬಿದ್ದ ಮಹಿಳೆ : ಚಾಲಕನ ಸಮಯ ಪ್ರಜ್ಞೆಯಿಂದ ಮಹಿಳೆಯ ರಕ್ಷಣೆ

ಮಂಗಳೂರು : ಬಸ್‌ನಲ್ಲಿ ಅಚಾನಕ್ ಕುಸಿದು ಬಿದ್ದ ಮಹಿಳೆಯನ್ನು ತಕ್ಷಣ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದ ಘಟನೆ ಜ.28ರಂದು ಮಂಗಳೂರಿನಲ್ಲಿ ನಡೆದಿದೆ.

ಕೈಕಂಬದಿಂದ ಸ್ಟೇಟ್‌ ಬ್ಯಾಂಕ್‌ ಗೆ ತೆರಳುತ್ತಿದ್ದ ಬಸ್‌ನಲ್ಲಿ ಮಹಿಳೆಯರೊಬ್ಬರು ಪ್ರಯಾಣಿಸುತ್ತಿದ್ದರು. ಈ ವೇಳೆ ಮಹಿಳೆಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದ್ದು ಕುಳಿತಿದ್ದ ಸೀಟಿನಲ್ಲೇ ಕುಸಿದು ಬಿದ್ದರು. ಇದನ್ನು ಗಮನಿಸಿದ ಬಸ್‌ ಚಾಲಕ ತೌಸೀಫ್ ಹಾಗೂ ನಿರ್ವಾಹಕ ತೌಸೀಫ್ ನೇರವಾಗಿ ಬಸ್‌ ಅನ್ನು ಆಸ್ಪತ್ರೆಯತ್ತ ಚಲಾಯಿಸಿದ್ದಾರೆ.

ಬಸ್‌ ಸಿಬ್ಬಂದಿಯ ಸಮಯ ಪ್ರಜ್ಞೆ ಹಾಗೂ ಮಾನವೀಯ ಕಾರ್ಯದಿಂದ ಮಹಿಳೆಯ ಪ್ರಾಣ ಉಳಿದಿದ್ದು ಅವರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *