ಮಂಗಳೂರು: ರೈಲು ಹತ್ತುವ ಧಾವಂತದಲ್ಲಿ ಕೆಳಗೆ ಬೀಳುತ್ತಿದ್ದ ಮಹಿಳೆಯೊಬ್ಬರ ಜೀವವನ್ನು ಪಾಯಿಂಟ್‌ಮ್ಯಾನ್ ಸಮಯಪ್ರಜ್ಞೆಯಿಂದ ರಕ್ಷಿಸಿದ ಘಟನೆ ಜ.27ರಂದು ಸುರತ್ಕಲ್ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ.

ಮಂಗಳೂರಿನಿಂದ ಮಡಗಾಂವ್‌ಗೆ ತೆರಳುತ್ತಿದ್ದ ರೈಲಿನಲ್ಲಿ ಕುಮಟಾಕ್ಕೆ ಹೋಗಲು ಮಹಿಳೆಯೊಬ್ಬರು ಆಗಮಿಸಿದ್ದರು. ರೈಲು ಆಗಲೇ ಚಲಿಸಲು ಆರಂಭಿಸಿದ್ದರಿಂದ ಟಿಕೆಟ್ ಪಡೆಯದೆ ಓಡಿಕೊಂಡು ಬಂದು ರೈಲು ಹತ್ತಲು ಪ್ರಯತ್ನಿಸಿದ್ದಾರೆ. ಈ ವೇಳೆ ಕಾಲು ಜಾರಿ ಕೆಳಗೆ ಬೀಳುವ ಹಂತಕ್ಕೆ ತಲುಪಿದ್ದಾಗ, ಬಾವುಟ ತೋರಿಸುವ ಕರ್ತವ್ಯದಲ್ಲಿದ್ದ ಪಾಯಿಂಟ್‌ಮ್ಯಾನ್ ಐಸಾಕ್ ತಕ್ಷಣ ಧಾವಿಸಿ ಮಹಿಳೆಯನ್ನು ಹಿಡಿದು ಮೇಲಕ್ಕೆತ್ತುವ ಮೂಲಕ ಭಾರಿ ಅನಾಹುತವನ್ನು ತಪ್ಪಿಸಿದ್ದಾರೆ.




