Breaking
9 May 2026, Sat

ಪತಿಯಿಂದಲೇ ಪತ್ನಿ-ಮಕ್ಕಳಿಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ

ಕುಂದಾಪುರ: ಪತಿಯೇ ಪತ್ನಿ ಹಾಗೂ ಮಕ್ಕಳಿಗೆ ದೈಹಿಕ-ಮಾನಸಿಕ ಕಿರುಕುಳ ನೀಡಿದ ಘಟನೆ ಕೋಟೇಶ್ವರದಲ್ಲಿ ನಡೆದಿದೆ.

ಅಸ್ಯಾಳ ಪತಿ ಶೇಕ್ ಮೊಹಮ್ಮದ್ ಇಲಿಯಾಸ್ ವಿದೇಶದಲ್ಲಿ ಸೂಪರ್ ವೈಸರ್ ಆಗಿ ಕೆಲಸ ಮಾಡಿಕೊಂಡಿದ್ದು ಆಗಾಗ ಊರಿಗೆ ಬಂದು ಹೋಗುತ್ತಿದ್ದನು. ಆದರೆ ಆಕೆಯ ಜೊತೆ ಯಾವುದೇ ಸಂಪರ್ಕ ಇರಿಸಿಕೊಳ್ಳದೆ, ಖರ್ಚಿಗೂ ಹಣ ನೀಡುತ್ತಿರಲಿಲ್ಲ. ಅಲ್ಲದೆ ಮಕ್ಕಳನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿರಲಿಲ್ಲ.

ಕಳೆದ ಜುಲೈ 17ರಂದು ಈ ವಿಷಯ ಕುರಿತು ಪ್ರಶ್ನಿಸಿದ್ದಕ್ಕೆ ಆರೋಪಿತನು ಬೆಲ್ಟ್‌ನಿಂದ ಪುತ್ರನಿಗೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.

ಅನಂತರ ಅಕ್ಟೋಬರ್ ನಲ್ಲಿ ಊರಿಗೆ ಬಂದಿದ್ದ ವೇಳೆ ಅಸ್ಯಾಳ ಚಿನ್ನ ತೆಗೆದುಕೊಂಡು ಹೋಗಿದ್ದು ಕಳೆದ ಜ.13ರಂದು ಅಂಚೆ ಮೂಲಕ ತಲಾಖ್ ನೋಟಿಸ್ ನೀಡಿದ್ದಾನೆ.

ಪದೇಪದೇ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುವುದರ ಜೊತೆಗೆ ಜೀವ ಬೆದರಿಕೆ ಹಾಕಿರುವುದಾಗಿ ಆರೋಪಿಸಿ, ಪತ್ನಿ ಅಸ್ಯಾ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಶೇಕ್ ಮೊಹಮ್ಮದ್ ಇಲಿಯಾಸ್ ವಿರುದ್ಧ ದೂರು ದಾಖಲಿಸಿದ್ದಾರೆ.

Leave a Reply

Your email address will not be published. Required fields are marked *