Breaking
29 Jun 2026, Mon

ಬಾಡಿಗೆ ಮನೆಯಲ್ಲಿ ವಾಸವಿದ್ದ ವ್ಯಕ್ತಿ ನಾಪತ್ತೆ

ಬೆಳ್ತಂಗಡಿ : ಬೆಂಗಳೂರಿನಲ್ಲಿದ್ದ ಪತ್ನಿಯ ಮನೆಗೆ ಬರುವುದಾಗಿ ತಿಳಿಸಿ ಬಳಿಕ ಅಲ್ಲಿಗೆ ಹೋಗದೆ, ಮನೆಯಲ್ಲಿಯೂ ಇರದೆ ವ್ಯಕ್ತಿಯೊಬ್ಬರು ನಾಪತ್ತೆಯಾದ ಘಟನೆ ಜ.25 ರಂದು ನಡೆದಿದೆ.

ಬೆಳ್ತಂಗಡಿಯ ಚರ್ಚ್ ರಸ್ತೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಬಂಟ್ವಾಳ ಕುಕ್ಕಿಪಾಡಿಯ ರೋಶನ್ ಕಿರಣ್ ಡಿಸೋಜ(36) ನಾಪತ್ತೆಯಾದ ವ್ಯಕ್ತಿ ಎಂದು ತಿಳಿದುಬಂದಿದೆ.

ಅವರು ಪಿಕಾಪ್ ಚಾಲಕರಾಗಿ ದುಡಿಯುತ್ತಿದ್ದರು.

ಜ. 25ರಂದು ಬೆಳಗ್ಗೆ ಬಸ್ ಹತ್ತಿ ಬೆಂಗಳೂರಿಗೆ ಬರುವುದಾಗಿ ಪತ್ನಿಗೆ ತಿಳಿಸಿದರು ಆದರೆ ಬೆಂಗಳೂರಿಗೂ ತೆರಳದೇ, ಮನೆಯಲ್ಲಿಯೂ ಇರದೇ, ಪೋನ್‌ಅನ್ನು ಸ್ವೀಕರಿಸದೇ ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ಈ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅವರ ಸುಳಿವು ಪತ್ತೆಯಾದರೆ ಬೆಳ್ತಂಗಡಿ ಠಾಣೆಗೆ ಮಾಹಿತಿ ನೀಡುವಂತೆ ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *