ಮಂಗಳೂರು : ಕಾರು ಡಿಕ್ಕಿ ಹೊಡೆದು ಪಾದಾಚಾರಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಮೂಲ್ಕಿಯ ರಾಷ್ಟ್ರೀಯ ಹೆದ್ದಾರಿ 66ರ ಕಾರ್ನಾಡು ಕೊಕ್ಕರಕಲ್ ಎಂಬಲ್ಲಿ ನಡೆದಿದೆ.
ಮೃತಪಟ್ಟವರನ್ನು ಚಿತ್ರಾಪು ಮರ್ಕುಂಜ ನಿವಾಸಿ ವನಜಾ ಪುರುಷೋತ್ತಮ ಪೂಜಾರಿ (59) ಎಂದು ಗುರುತಿಸಲಾಗಿದೆ.

ವನಜಾ ಮತ್ತು ಜೆಸಿಂತಾ ಮಚಾದೊ ಎಂಬವರು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದಾಗ ವೇಗವಾಗಿ ಬಂದ ಕಾರು ಇಬ್ಬರಿಗೂ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರು ರಸ್ತೆ ಬದಿಯಲ್ಲಿದ್ದ ಕಬ್ಬಿಣದ ಸೈಡ್ ಗಾರ್ಡ್‌ಗೆ ಹೊಡೆದು ನಿಂತಿದೆ. ಅಪಘಾತದ ತೀವ್ರತೆಗೆ ವನಜಾ ಅವರು ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜೊತೆಯಲ್ಲಿದ್ದ ಜೆಸಿಂತಾ ಮಚಾದೊ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮೃತರು ಪತಿ ಮತ್ತು ಓರ್ವ ಪುತ್ರನನ್ನು ಅಗಲಿದ್ದಾರೆ.





