Breaking
22 Mar 2026, Sun

ಸೌತ್ ಕೆನರಾ ಪೊಟೋಗ್ರಾಫರ್ಸ್ ಅಸೋಶಿಯೇಶನ್ ಬಂಟ್ವಾಳ ವಲಯದಿಂದ ಪತ್ರಕರ್ತ, ರಂಗನಿರ್ದೇಶಕ ಗೋಪಾಲ ಅಂಚನ್ ರವರ ವೈದ್ಯಕೀಯ ಚಿಕಿತ್ಸೆಗೆ ಆರ್ಥಿಕ ನೆರವು

ಬಂಟ್ವಾಳ: ಅನಾರೋಗ್ಯದಿಂದ ಬಳಲುತ್ತಿರುವ ಪತ್ರಕರ್ತ, ರಂಗನಿರ್ದೇಶಕ ಗೋಪಾಲ ಅಂಚನ್ ಅವರಿಗೆ ಸೌತ್ ಕೆನರಾ ಪೊಟೋಗ್ರಾಫರ್ಸ್ ಅಸೋಶಿಯೇಶನ್ ಬಂಟ್ವಾಳ ವಲಯದಿಂದ ವೈದ್ಯಕೀಯ ಚಿಕಿತ್ಸೆಗೆ ಆರ್ಥಿಕ ನೆರವು ನೀಡಲಾಯಿತು.

ಗೋಪಾಲ್ ಅಂಚನ್ ಅವರು ಕಳೆದ ಮೂರೂವರೆ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆದ ಎಸ್ ಕೆಪಿಎ ಬಂಟ್ವಾಳ ವಲಯದ ರಜತ ಸಂಭ್ರಮದ ಸಮಾರೋಪ ಹಾಗೂ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ವೈದ್ಯಕೀಯ ವೆಚ್ಚದ ನೆರವನ್ನು ಹಸ್ತಾಂತರಿಸಲಾಯಿತು.

ಈ ಸಂದರ್ಭ ನೂತನ ಅಧ್ಯಕ್ಷ ರಾಜೇಂದ್ರ ಕೆ. ಕಾರ್ಯದರ್ಶಿ ರವಿ ಕಲ್ಪನೆ, ಕೋಶಾಧಿಕಾರಿ ಕೃಷ್ಣರಾವ್, ಇತರ ಪದಾಧಿಕಾರಿಗಳು, ಅತಿಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *