Breaking
26 Sep 2026, Sat

ನವುಂಡ ದೇವಸ್ಥಾನದ ಬಳಿ ಎರಡು ಚಿರತೆಗಳು ಪತ್ತೆ

ಬೆಳ್ತಂಗಡಿ: ಎರಡು ಚಿರತೆಗಳು ರಸ್ತೆ ಬದಿ ಕಂಡುಬಂದಿದ್ದು, ನಾಯಿಯೊಂದರ ಮೇಲೆ ದಾಳಿ ನಡೆಸಿ ಕೊಂದು ಹಾಕಿದ ಘಟನೆ ಮಡಂತ್ಯಾರು ಸಮೀಪದ ಮಾಲಾಡಿ ಗ್ರಾಮದ ಅಂತರ, ನವುಂಡ ದೇವಸ್ಥಾನದ ಬಳಿ ನಡೆದಿದೆ.

ಸ್ಥಳೀಯರೊಬ್ಬರು ರಾತ್ರಿ ವೇಳೆ ಬೈಕ್ ನಲ್ಲಿ ಸಂಚಾರಿಸುತ್ತಿದ್ದಾಗ ಚಿರತೆಗಳು ರಸ್ತೆ ಬದಿ ಕಂಡುಬಂದಿದೆ. ತಕ್ಷಣವೇ ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಇಲಾಖಾಧಿಕಾರಿಗಳು ರಾತ್ರಿಯೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಚಿರತೆ ಸೆರೆ ಹಿಡಿಯಲು ಬೋನ್ ಇಡುವುದಾಗಿ ಭರವಸೆ ನೀಡಿದ್ದಾರೆ.

Leave a Reply

Your email address will not be published. Required fields are marked *