Breaking
22 Mar 2026, Sun

ಮುಕ್ತೇಶ್ವರ ದೇವಸ್ಥಾನದ ಅರ್ಚಕ ಮುತ್ತೋಟ ಪದ್ಮನಾಭ ಭಟ್ ಅವರಿಗೆ ನುಡಿ ನಮನ

ಬಂಟ್ವಾಳ: ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನ ಸಜಿಪ ನಡುವಿನ ಶ್ರೀಕ್ಷೇತ್ರದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮುಳ್ಳುಂಜ ವೆಂಕಟೇಶ್ವರ ಭಟ್ ಅವರ ಅಧ್ಯಕ್ಷತೆಯಲ್ಲಿ ಜ.21ರಂದು ಶ್ರದ್ಧಾಂಜಲಿ ಸಭೆ ನಡೆಯಿತು.

ಈ ಸಂದರ್ಭದಲ್ಲಿ ಮುಕ್ತೇಶ್ವರ ದೇವಸ್ಥಾನದ ಅರ್ಚಕ ಮುತ್ತೋಟ ಪದ್ಮನಾಭ ಭಟ್ ಅವರಿಗೆ ನುಡಿ ನಮನ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್, ವೇದಮೂರ್ತಿ ಶಿವರಾಮ ಮೈಯ್ಯ, ಕೆ. ರಾಧಾಕೃಷ್ಣ ಆಳ್ವ, ನಿವೃತ್ತ ನೌಕಾದಳ ಸೈನಿಕ ವಸಂತ ರಾವ್, ನಿವೃತ್ತ ಉಪ ಪ್ರಾಂಶುಪಾಲ ವೆಂಕಟರಮಣ ಭಟ್ ವೆಂಕಪ್ಪ, ಕಿಶನ್ ಸೇಣವ, ಸೋಮನಾಥ ಮೊದಲಾದವರು ಮೃತರು ಸಮಾಜಕ್ಕೆ ಸಲ್ಲಿಸಿದ ಸೇವೆಯನ್ನು ಸ್ಮರಿಸಿ ನುಡಿ ನಮನ ಸಲ್ಲಿಸಿದರು.

Leave a Reply

Your email address will not be published. Required fields are marked *